ಕೆಪಿಎಸ್‌ಗೆ ಪಾರದರ್ಶಕವಾಗಿ ಮಕ್ಕಳ ಆಯ್ಕೆ, ಪ್ರಾಂಶುಪಾಲ ಅಮರೇಶ ದೇವರಾಳ ಹೇಳಿಕೆ

MEETING
ಕನಕಗಿರಿಯ ಕೆಪಿಎಸ್ ನಲ್ಲಿ ಲಾಟರಿ ಪ್ರಕ್ರೀಯೆಯಲ್ಲಿ ಪ್ರಾಂಶುಪಾಲ ಅಮರೇಶ ದೇವರಾಳ ಮಾತನಾಡಿದರು. ಸಂಪನ್ಮೂಲ ವ್ಯಕ್ತಿ ರಾಜೀವ್, ಮುಖ್ಯಶಿಕ್ಷಕ ತುಳಜಾ ನಾಯ್ಕ, ಉಪನ್ಯಾಸಕರಾದ ಪಂಪಾರೆಡ್ಡಿ ಗಚ್ಚಿನಮನಿ ಇತರರಿದ್ದರು.
Published on

ಕನಕಗಿರಿ: ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯ ಎಲ್‌ಕೆಜಿಯ 60 ಸ್ಥಾನ ಹಾಗೂ 1ರಿಂದ 7ನೇ ತರಗತಿಗಳಿಗೆ ಖಾಲಿ ಇರುವ ಸ್ಥಾನಗಳನ್ನು ಲಾಟರಿ ಮೂಲಕ ಪಾರದರ್ಶಕವಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಕೆಪಿಎಸ್ ಪ್ರಾಂಶುಪಾಲ ಅಮರೇಶ ದೇವರಾಳ ಹೇಳಿದರು.

ಇಲ್ಲಿನ ಕೆಪಿಎಸ್ ಕಾಲೇಜು ವಿಭಾಗದಲ್ಲಿ ಗುರುವಾರ ನಡೆದ ಎಲ್‌ಕೆಜಿ ಹಾಗೂ ಪ್ರಾಥಮಿಕ ವಿಭಾಗದಲ್ಲಿ ಖಾಲಿ ಇದ್ದ ಸ್ಥಾನಗಳಿಗೆ ಲಾಟರಿ ಮೂಲಕ ಆಯ್ಕೆ ಪ್ರಕ್ರಿಯೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಯಾವುದೇ ಗೊಂದಲಗಳಿಗೆ ಅವಕಾಶ ಮಾಡಿಕೊಡದೆ, ಲಾಟರಿ ಮೂಲಕ ಆಯ್ಕೆ ಮಾಡಲಾಗುತ್ತಿದೆ. 60 ಸೀಟುಗಳಿರುವ ಎಲ್‌ಕೆಜಿ ವಿಭಾಗಕ್ಕೆ 95 ಅರ್ಜಿಗಳು, 1ರಿಂದ 7ನೇ ತರಗತಿಯಲ್ಲಿನ ಖಾಲಿ ಇರುವ 38 ಸ್ಥಾನಗಳಿಗೆ 89 ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಸ್ಥಾನಗಳನ್ನು ಸಹ ಲಾಟರಿ ಮೂಲಕ ಪಾರದರ್ಶಕವಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ.

ಎಲ್‌ಕೆಜಿ ವಿಭಾಗಕ್ಕೆ ಹೆಚ್ಚುವರಿ 5 ಮಕ್ಕಳನ್ನು ಆಯ್ಕೆ ಮಾಡಿ ಇಟ್ಟುಕೊಂಡಿದ್ದು, 60 ವಿದ್ಯಾರ್ಥಿಗಳಲ್ಲಿ ಯಾರಾದರೂ ದಾಖಲಾತಿ ಹೊಂದಿಲ್ಲದಿದ್ದರೆ ಆ ಸ್ಥಾನಗಳಿಗೆ ಈ ಐದು ಸ್ಥಾನಗಳಲ್ಲಿದ್ದವರಿಗೆ ಆದ್ಯತೆ ಮೇರೆಗೆ ಅವಕಾಶ ನೀಡಲಾಗುವುದು ಎಂದರು.

ಸಂಪನ್ಮೂಲ ವ್ಯಕ್ತಿ ರಾಜೀವ್, ಮುಖ್ಯಶಿಕ್ಷಕ ತುಳಜಾ ನಾಯ್ಕ, ಉಪನ್ಯಾಸಕರಾದ ಪಂಪಾರೆಡ್ಡಿ ಗಚ್ಚಿನಮನಿ, ಶಿವಪುತ್ರಪ್ಪ ಗಳಪೂಜೆ, ಶಿಕ್ಷಕಿಯರಾದ ವಿಮಲಾಬಾಯಿ ಜೋಶಿ, ಜ್ಯೋತಿ ಭತ್ತದ ಇತರರಿದ್ದರು.

ಶಿಕ್ಷಕರ ನೇಮಕಕ್ಕೆ ಆಗ್ರಹ: ಕರ್ನಾಟಕ ಪಬ್ಲಿಕ್ ಶಾಲೆಗೆ ಹೆಚ್ಚುವರಿ ಶಿಕ್ಷಕರನ್ನು ನಿಯೋಜಿಸಬೇಕೆಂದು ಒತ್ತಾಯಿಸಿ ಪಾಲಕರು ಗುರುವಾರ ಸಿಆರ್‌ಪಿ ರಾಜೀವ್‌ಗೆ ಮನವಿ ಸಲ್ಲಿಸಿದರು. ಐದಾದು ವರ್ಷಗಳಿಂದ ಕೆಪಿಎಸ್‌ಗೆ ವಿದ್ಯಾರ್ಥಿಗಳಿಗನುಗುಣವಾಗಿ ಶಿಕ್ಷಕರಿಲ್ಲದೆ ಶಿಕ್ಷಣ ಕುಂಠಿತಗೊಂಡಿದೆ. ಈ ಹಿಂದೆ ಜಿಲ್ಲಾಧಿಕಾರಿ, ಬಿಇಒ ಹಾಗೂ ಸ್ಥಳೀಯ ಮಟ್ಟದ ಶಿಕ್ಷಣ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಸ್ಪಂದಿಸಿಲ್ಲ. ಶಿಕ್ಷಕರ ಕೊರತೆಯಿಂದ ಮಕ್ಕಳ ಶೈಕ್ಷಣಿಕ ಸುಧಾರಣೆಗೆ ಕ್ಷೀಣಿಸಿದ್ದರಿಂದ ಹಲವು ಪಾಲಕರು ಅನ್ಯ ಶಾಲೆಗಳತ್ತ ಮುಖ ಮಾಡಿದ್ದಾರೆ ಎಂದು ಪಾಲಕರು ದೂರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net