

ಕನಕಗಿರಿ: ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯ ಕಾಲೇಜು ವಿಭಾಗದಲ್ಲಿ 605 ವಿದ್ಯಾರ್ಥಿಗಳು ಪಿಯು ಪರೀಕ್ಷೆಯಲ್ಲಿ ಕನ್ನಡ ಪರೀಕ್ಷೆಯನ್ನು ಶನಿವಾರ ಬರೆದರು.
ಪರೀಕ್ಷಾ ಕೇಂದ್ರದಲ್ಲಿ ತಾಲೂಕು ವ್ಯಾಪ್ತಿಯ ಇಲ್ಲಿನ ಕೆಪಿಎಸ್ ಪಿಯುಸಿ, ಚನ್ನಶ್ರೀರುದ್ರ ಪಿಯು ಕಾಲೇಜು, ನವಲಿಯ ಸ.ಪ.ಪೂ.ಕಾಲೇಜು, ಬೆಸ್ಟ್ ಪಿಯು ಕಾಲೇಜು ಹಾಗೂ ಯಲಬುರ್ಗಾ ತಾಲೂಕಿನ ಗಾಣದಾಳ ಸ.ಪ.ಪೂ.ಕಾಲೇಜಿನ ಒಟ್ಟು 649 ವಿದ್ಯಾರ್ಥಿಗಳ ಪೈಕಿ 605 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದರು. 44 ವಿದ್ಯಾರ್ಥಿಗಳು ಗೈರಾಗಿದ್ದರು.
ಪರೀಕ್ಷೆಗಾಗಿ ಒಟ್ಟು 22 ಕೊಠಡಿಗಳನ್ನು ವ್ಯವಸ್ಥೆ ಮಾಡಲಾಗಿತ್ತು. ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದ್ದು, ಮೊದಲ ದಿನದ ಪರೀಕ್ಷೆ ಶಾಂತಿಯುತವಾಗಿ ನಡೆಯಿತು. ಮುಖ್ಯ ಅಧೀಕ್ಷಕ ಅಮರೇಶ ದೇವರಾಳ, ಸಹ ಅಧೀಕ್ಷಕ ಶರಣಪ್ಪ ಭಜಂತ್ರಿ, ವೀಕ್ಷಕರಾಗಿ ವಿರೂಪಾಕ್ಷ, ಜಾಗೃತದಳ ಸದಸ್ಯರಾದ ಶಾಂತವೀರಪ್ಪ, ರಮೇಶ ಎಂ.ಉಪನ್ಯಾಸಕಾರದ ಶಿವಪುತ್ರಪ್ಪ ಗಳಪೂಜೆ, ಬಸವರಾಜ ತೊಂಡಿಹಾಳ, ಹನುಮೇಶಗೌಡ, ಹನುಮಂತಪ್ಪ ತಿದಿ, ಶಿವಶರಣ, ರೇಖಾ ಸೇರಿ ಇತರರು ಕಾರ್ಯ ನಿರ್ವಹಿಸಿದರು.