ಪೂರ್ಣ ಪ್ರಮಾಣದ ಕೂಲಿ ಪಾವತಿಸಿ

Labourers' Association
ಕನಕಗಿರಿ ತಾಲೂಕಿನ ಚಿಕ್ಕಡಂಕನಕಲ್ ಗ್ರಾಪಂ ಮುಂದೆ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ತಾಲೂಕು ಸಮಿತಿಯಿಂದ ಪ್ರತಿಭಟನೆ ಮಾಡಲಾಯಿತು. ಪ್ರಮುಖರಾದ ಎಂ.ಬಸವರಾಜ, ರಮೇಶ ಬಡಿಗೇರ, ಕೆ.ಹುಸೇನಪ್ಪ, ಬಾಳಪ್ಪ ಹುಲಿಹೈದರ ಇತರರಿದ್ದರು.
Published on

ಕನಕಗಿರಿ: ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸಮಾಡಿದ ತಾಲೂಕಿನ ಹಿರೆಡಂಕನಕಲ್ ಹಾಗೂ ಬಸವೇಶ್ವರ ಕ್ಯಾಂಪ್ ಕೂಲಿಕಾರರಿಗೆ ಪೂರ್ಣ ಪ್ರಮಾಣದಲ್ಲಿ ಕೂಲಿ ಪಾವತಿಸುವಂತೆ ಆಗ್ರಹಿಸಿ ಚಿಕ್ಕಡಂಕನಕಲ್ ಗ್ರಾಪಂ ಮುಂದೆ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದಿಂದ ಶನಿವಾರ ಪ್ರತಿಭಟನೆ ಮಾಡಲಾಯಿತು.

ಉದ್ಯೋಗ ಖಾತ್ರಿ ಯೋಜನೆಯಡಿ ಚಿಕ್ಕಡಂಕನಕಲ್ ಗ್ರಾಪಂ ವ್ಯಾಪ್ತಿಯ ಹಿರೇಡಂಕನಕಲ್ ಹಾಗೂ ಬಸವೇಶ್ವರಕ್ಯಾಂಪ್ ಕೂಲಿಕಾರರು ಕೆಲಸ ಮಾಡುತ್ತಿದ್ದು, ಜೆಇ ಅವರು ಕಡಿಮೆ ಕೂಲಿ ಹಾಕಿದ್ದಾರೆ. ಕೇಂದ್ರ ಸರ್ಕಾರ ನರೇಗಾ ಕೂಲಿ 370 ರೂ.ಗೆ ನಿಗದಿಪಡಿಸಿದ್ದು, ಸದರಿ ಜೆಇ ಅಧ್ಯಕ್ಷರು ಮತ್ತು ಪಿಡಿಒಗಳು ಕಡಿಮೆ ಹಣ ಜಮಾ ಮಾಡುತ್ತಿದ್ದಾರೆ. ಆದ್ದರಿಂದ ಕಾರ್ಮಿಕರಿಗೆ ಪೂರ್ಣ ಪ್ರಮಾಣದಲ್ಲಿ ಕೂಲಿ ಹಣ ಪಾವತಿ ಮಾಡಬೇಕು. ಕೆಲಸದ ಸ್ಥಳದಲ್ಲಿ ಮೂಲಭೂತ ಸೌಕರ್ಯ ಒದಗಿಸಬೇಕು.

ವಿಭಾಗ ಮಾಡಿದ ಜಾಬ್ ಕಾರ್ಡ್‌ಗಳಿಗೆ ಆಧಾರ್ ಸ್ವಿಪ್ಟಿಂಗ್ ಮಾಡಬೇಕು. ದನದ ಶೆಡ್ ನಿರ್ಮಿಸಿದ ಫಲಾನುಭವಿಗಳಿಗೆ ಹಣ ಪಾವತಿ ಮಾಡಬೇಕು. ಕೆಲಸದ ಸಮಯದಲ್ಲಿ ಆಕಸ್ಮಿಕ ಸಾವಿಗೀಡಾದ ಹನುಮಂತಪ್ಪ ಆದಾಪೂರ ಅವರಿಗೆ ಶೀಘ್ರ ಪರಿಹಾರ ನೀಡಬೇಕು ಎಂದು ತಾಪಂ ಎಡಿ ಶರಪೂನ್ನಿಸಾ ಬೇಗಂಗೆ ಮನವಿ ಸಲ್ಲಿಸಿದರು.

ಪ್ರಮುಖರಾದ ಎಂ.ಬಸವರಾಜ, ರಮೇಶ ಬಡಿಗೇರ, ಕೆ.ಹುಸೇನಪ್ಪ, ಬಾಳಪ್ಪ ಹುಲಿಹೈದರ, ಮರಿನಾಗಪ್ಪ ಡಗ್ಗಿ, ಬಾಲಪ್ಪ, ಪಂಪಾಪತಿ, ಯಮನೂರಪ್ಪ ಕುಂಬಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net