

ಕನಕಗಿರಿ: ತಾಲೂಕಿನ ಕನಕಾಪುರದ ಶ್ರೀ ಮಾರುತೇಶ್ವರ ಜಾತ್ರೆ ಉಚ್ಚಾಯಕ್ಕೆ ಹೂವಿನ ಹಾರ ಕಟ್ಟಲು ಮೇಲೇರಿದ್ದ ಯುವಕ ಕಾಲು ಜಾರಿ ಬಿದ್ದು ಶನಿವಾರ ಮೃತಪಟ್ಟಿದ್ದು, ತಡವಾಗಿ ವರದಿಯಾಗಿದೆ. ಗ್ರಾಮದ ಸಣ್ಣ ಮಾರುತಿ (22) ಮೃತ ಯುವಕ.
ಉಚ್ಚಾಯ ಏರಿ ಹೂವಿನ ಹಾರ ಕಟ್ಟುವಾಗ ಕಾಲು ಜಾರಿ ಸಿಸಿ ರಸ್ತೆ ಮೇಲೆ ಬಿದಿದ್ದರಿಂದ ತಲೆಗೆ ತೀವ್ರ ಪೆಟ್ಟಾಗಿದ್ದು, ಕನಕಗಿರಿ ಸಮುದಾಯ ಆರೋಗ್ಯ ಕೇಂದ್ರ, ಕೊಪ್ಪಳದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹುಬ್ಬಳ್ಳಿಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಮೃತನ ತಂದೆ ನೀಡಿದ ದೂರಿನ ಅನ್ವಯ ಯುಡಿಆರ್ (ಅಸಹಜ ಸಾವು) ಎಂದು ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.