ಇಂದೋರ್‌ಗೆ ಕನಕಗಿರಿ ಪಪಂ ಸದಸ್ಯರು

Kanakagiri panchayat members visit to indore
ಘನ ತ್ಯಾಜ್ಯ ವಿಲೇವಾರಿ ಘಟಕ ಹಾಗೂ ಸ್ವಚ್ಛತೆ ಕುರಿತು ಅಧ್ಯಯನಕ್ಕಾಗಿ ಕನಕಗಿರಿ ಪಪಂ ಸದಸ್ಯರು ಇಂದೋರ್‌ಗೆ ಪ್ರಯಾಣ ಬೆಳೆಸಿದರು. ಮುಖ್ಯಾಧಿಕಾರಿ ಲಕ್ಷ್ಮಣ ಕಟ್ಟಿಮನಿ, ಸದಸ್ಯರಾದ ರಾಜಾಸಾಬ್ ನಂದಾಪುರ, ಅನಿಲಕುಮಾರ್ ಬಿಜ್ಜಳ, ಹನುಮಂತ ಬಸರಿಗಿಡ ಇತರರಿದ್ದರು.
Published on

ಕನಕಗಿರಿ: ಸ್ವಚ್ಛ ಭಾರತ್ ಮಿಷನ್ 2025 ಎಸ್‌ಬಿಎಂ 2.0 ಅಡಿಯಲ್ಲಿ ಘನ ತ್ಯಾಜ್ಯ ವಿಲೇವಾರಿ ನಿರ್ವಹಣೆ ಹಾಗೂ ಸ್ವಚ್ಛತೆ ಕುರಿತು ಅಧ್ಯಯನಕ್ಕಾಗಿ ಪಪಂನ 9 ಸದಸ್ಯರು ಮಂಗಳವಾರ ಮಧ್ಯ ಪ್ರದೇಶದ ಇಂದೋರ್‌ಗೆ ಪ್ರವಾಸಕ್ಕೆ ತೆರಳಿದರು.

ಕನಕಗಿರಿ ಪಪಂ ಆಗಿ ಮೇಲ್ದರ್ಜೆಗೇರಿದ ಬಳಿಕ ಪಟ್ಟಣ ಅಭಿವೃದ್ಧಿ ಹೊಂದುತ್ತಿದೆ. ಮನೆ, ಅಂಗಡಿ, ಕಾರ್ಖಾನೆಯಿಂದ ಸಂಗ್ರಹವಾಗುವ ತ್ಯಾಜ್ಯ ವಿಲೇವಾರಿ ಹಾಗೂ ಸ್ವಚ್ಛತೆಗೆ ಕರಡಿಗುಡ್ಡ ರಸ್ತೆಯಲ್ಲಿ ವಿಲೇವಾರಿ ಘಟಕ ನಿರ್ಮಿಸಲಾಗಿದೆ. ಆದ್ದರಿಂದ ಕಸ ಸಂಗ್ರಹಣೆ, ಬೇರ್ಪಡಿಸುವಿಕೆ, ಮರು ಬಳಕೆ ಕುರಿತು ಪಪಂ ಸದಸ್ಯರು ಇಂದೋರ್‌ನಲ್ಲಿ ವಿಲೇವಾರಿ ಘಟಕದ ಮಾಹಿತಿಯನ್ನು ಪಡೆಯಲಿದ್ದಾರೆ.

ಸದಸ್ಯರು ಪಟ್ಟಣದಿಂದ ಖಾಸಗಿ ವಾಹನದಲ್ಲಿ ಹೈದ್ರಾಬಾದ್‌ಗೆ ತೆರಳಿ ಅಲ್ಲಿಂದ ಬುಧವಾರ ಬೆಳಗ್ಗೆ 5 ಗಂಟೆಗೆ ವಿಮಾನದ ಮೂಲಕ ಇಂದೋರ್ ತಲುಪಲಿದ್ದಾರೆ ಎಂದು ಮುಖ್ಯಾಧಿಕಾರಿ ಲಕ್ಷ್ಮಣ ಕಟ್ಟಿಮನಿ ತಿಳಿಸಿದರು. ಸದಸ್ಯರಾದ ರಾಕೇಶ್ ಕಂಪ್ಲಿ, ರಾಜಾಸಾಬ್ ನಂದಾಪುರ, ಅನಿಲ್ ಕುಮಾರ್ ಬಿಜ್ಜಳ, ಸುರೇಶ ಗುಗ್ಗಳಶೆಟ್ಟರ್, ಶರಣೆಗೌಡ, ಹನುಮಂತ ಬಸರಿಗಿಡ, ಅಭಿಷೇಕ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net