

ಕನಕಗಿರಿ: ಮಾನಸಿಕ ಹಾಗೂ ದೈಹಿಕ ಸದೃಢತೆಗೆ ಯುವಕರು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ಇಲ್ಲಿನ ಕೆಪಿಎಸ್ ಮೈದಾನದಲ್ಲಿ ಶನಿವಾರ ಕನಕಗಿರಿ ಪ್ರೀಮಿಯರ್ ಲೀಗ್‌ನ 5ನೇ ಆವೃತ್ತಿಗೆ ಚಾಲನೆ ನೀಡಿ ಮಾತನಾಡಿದರು. ಸದ್ಯ ಕ್ರಿಕೆಟ್ ಆಟವು ಮಕ್ಕಳಿಂದ ಹಿಡಿದು ವೃದ್ಧರವರೆಗೆ ಆಕರ್ಷಿತ ಕ್ರೀಡೆಯಾಗಿರುವುದು ಮಾತ್ರ ಸುಳ್ಳಲ್ಲ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಗಂಗಾಧರಸ್ವಾಮಿ, ಪ್ರಮುಖರಾದ ರಡ್ಡಿ ಶ್ರೀನಿವಾಸ, ತಾಪಂ ಮಾಜಿ ಅಧ್ಯಕ್ಷರಾದ ಬಸವಂತಗೌಡ ಪಾಟೀಲ್, ಮಲ್ಲಿಕಾರ್ಜುನಗೌಡ ಪಾಟೀಲ್, ಹೊನ್ನೂರಸಾಬ್ ಮೇಸ್ತ್ರಿ, ಪಪಂ ಸದಸ್ಯರಾದ ಕಂಠಿರಂಗ ನಾಯಕ, ಶರಣೇಗೌಡ ಪಾಟೀಲ್, ಅನಿಲ್ ಬಿಜ್ಜಳ, ರಾಕೇಶ ಕಂಪ್ಲಿ, ಪ್ರಮುಖರಾದ ಸಿದ್ದಾರ್ಥ ಮಲ್ಲದಗುಡ್ಡ, ನೀಲಕಂಠ ಬಡಿಗೇರ್, ರಾಜೇಶ ಬೆಲ್ಲಂಕೊಂಡಿ, ಶಾಂತಪ್ಪ ಬಸರಿಗಿಡದ್, ಮದರಸಾಬ್, ಜಡಿಯಪ್ಪ ಮುಕ್ಕುಂದಿ, ಕನಕಪ್ಪ ಮ್ಯಾಗಡೆ, ತಿಮ್ಮಣ್ಣ ಪೂಜಾರ, ಸದಾನಂದ ಸಮಗಂಡಿ ಇತರರಿದ್ದರು.
ತಾಲೂಕಿಗೂ ವಿಸ್ತರಣೆ: ಕಳೆದ 4 ಆವೃತ್ತಿ ಪಟ್ಟಣದವರಿಗಷ್ಟೇ ಸೀಮಿತವಾಗಿದ್ದ ಕೆಪಿಎಲ್‌ನಲ್ಲಿ ಈ ಬಾರಿ ಸುತ್ತಲಿನ ಗ್ರಾಮಗಳ ಕ್ರಿಕೆಟ್ ಪ್ರತಿಭೆಗಳಿಗೆ ಆಯೋಜಕರು ಅವಕಾಶ ನೀಡಿದ್ದಾರೆ. ಈ ಆವೃತ್ತಿಯಲ್ಲಿ 8 ತಂಡಗಳಿವೆ.