

ಕನಕಗಿರಿ, ಶ್ರೀ ಕನಕಾಚಲಪತಿ ಜಾತ್ರಾ ಮಹೋತ್ಸವದ 4ನೇ ದಿನವಾದ ಶನಿವಾರ (ಹಗಲು) ಹಂಸಾರೋಹಣ ಉತ್ಸವ ರಾಜಬೀದಿಯಲ್ಲಿ ಅದ್ದೂರಿಯಾಗಿ ಜರುಗಿತು.
ಉತ್ಸವ ಮೂರ್ತಿ ಹೊತ್ತ ಉಚ್ಛಾಯವು ಕನಕಾಚಲಪತಿ ದೇವಸ್ಥಾನದಿಂದ ಆರಂಭವಾಗಿ ರಾಜಬೀದಿ ಮೂಲಕ ಮೇಲುಗಡೆ ತೇರಿನ ಹನುಮಪ್ಪ ದೇಗುಲದವರೆಗೆ ಸಾಗಿತು. ವಿಶೇಷ ಪೂಜೆ, ಆರತಿ ಬಳಿಕ ಸ್ವ-ಸ್ಥಾನಕ್ಕೆ ತಲುಪಿತು. ಮೆರವಣಿಗೆಯಲ್ಲಿ ಭಾಜ-ಭಜಂತ್ರಿ ವಿವಿಧ ವಾದ್ಯ ಮೇಳಗಳು ಗಮನ ಸೆಳೆದವು. ಭಕ್ತರು ಉಚ್ಛಾಯಕ್ಕೆ ಪುಷ್ಪ, ತೆಂಗಿನಕಾಯಿ ಸಮರ್ಪಿಸಿ ಭಕ್ತಿ ಮೆರೆದರು. ಕಾಮಾಟಿಗರು ಸಂಪ್ರದಾಯದಂತೆ ಉತ್ಸವಮೂರ್ತಿ ಹೊತ್ತು ಬಿಸಿಲಿನಲ್ಲೇ ಬರಿಗಾಲಲ್ಲಿ ಗೋವಿಂದಾ ಗೋವಿಂದಾ ಎನ್ನುತ್ತಾ ಮೆರವಣಿಗೆ ನಡೆಸಿದರು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಾಗರಾಜ ತೆಗ್ಗಿಹಾಳ, ಕಾರ್ಯದರ್ಶಿ ಸಿದ್ದಲಿಂಗಯ್ಯಸ್ವಾಮಿ, ಪ್ರಮುಖರಾದ ಕನಕರೆಡ್ಡಿ ಮಹಲಿನಮನಿ, ರಾಮಣ್ಣ ಪಿನ್ನಿ, ರಂಗಪ್ಪ ನಾಯಕ, ಶರಣಬಸವರೆಡ್ಡಿ ಹುಲಿಹೈದರ, ಜಯರಾಮರೆಡ್ಡಿ ಬರ‌್ಗಿ, ಸುರೇಶರೆಡ್ಡಿ ಚಿತ್ರಿಕಿ, ಬಸವರಾಜ ಕುರುಬರ, ರಾಮಾಂಜನೇಯರೆಡ್ಡಿ ಚಿತ್ರಿಕಿ ಇತರರಿದ್ದರು.