ಕನಕಾಚಲಪತಿ ರಥದ ಪ್ರಯೋಗಿಕ ಪರೀಕ್ಷೆ

09032020 Kanakagiri Ratha new wheel
Published on

ಕನಕಗಿರಿ: ಪಟ್ಟಣದ ಇತಿಹಾಸ ಪ್ರಸಿದ್ಧ ಕನಕಾಚಲಪತಿ ದೇವಸ್ಥಾನದ ರಥಕ್ಕೆ ನೂತನವಾಗಿ ಗಾಲಿ ಮತ್ತು ಅಚ್ಚುಗಳನ್ನು ಅಳವಡಿಸಿದ್ದು, ಸೋಮವಾರ ಪ್ರಯೋಗಿಕವಾಗಿ ಪರೀಕ್ಷೆ ಮಾಡಲಾಯಿತು.

ಬಳಿಕ ದೇವಸ್ಥಾನದ ಇಒ ವಿಶ್ವನಾಥ ಮಾತನಾಡಿ, 80 ಲಕ್ಷ ರೂ, ವೆಚ್ಚದಲ್ಲಿ ರಥಕ್ಕೆ ನೂತನವಾಗಿ ಗಾಲಿ ಮತ್ತು ಅಚ್ಚುಗಳನ್ನು ಅಳವಡಿಸಲಾಗಿದೆ. ಪ್ರಯೋಗಿಕವಾಗಿ ಇಂದು ಪರೀಕ್ಷೆಯನ್ನು ಮಾಡಲಾಗಿದ್ದು, ಯಶಸ್ವಿಯಾಗಿದೆ. ಜಾತ್ರೆ ನಿಮಿತ್ತ ದೇವಸ್ಥಾನದಲ್ಲಿ ವಿವಿಧ ಕಾರ್ಯಕ್ರಮ ನಡೆಯುತ್ತಿವೆ. ಮಾ.16 ನಡೆಯುವ ಮಹಾರಥೋತ್ಸವಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net