ಕನಕಾಚಲಪತಿ ಹುಂಡಿ ಹಣ ಎಣಿಕೆ; 40 ದಿನಗಳಲ್ಲಿ 3.18 ಲಕ್ಷ ರೂ. ಸಂಗ್ರಹ

090922 Kanakagiri Temple Digital Payment
ಕನಕಾಚಲಪತಿ ದೇವಸ್ಥಾನದಲ್ಲಿ ಡಿಜಿಟಲ್ ಪೇಮೆಂಟ್ ವ್ಯವಸ್ಥೆಗೆ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ಜಿಲ್ಲಾ ಪ್ರಾದೇಶಿಕ ಪ್ರಬಂಧಕ ಎಂ.ಗುರುಪ್ರಸಾದರಾವ್ ಚಾಲನೆ ನೀಡಿದರು.
Published on

ಕನಕಗಿರಿ: ಪಟ್ಟಣದ ಐತಿಹಾಸಿಕ ಶ್ರೀ ಕನಕಾಚಲ ದೇವಸ್ಥಾನದಲ್ಲಿ ಬುಧವಾರ ಹುಂಡಿ ಹಣ ಎಣಿಕೆ ಮಾಡಿದ್ದು, 3.18 ಲಕ್ಷ ರೂ. ಸಂಗ್ರಹವಾಗಿದೆ. ಕಾಣಿಕೆ ಪೆಟ್ಟಿಗೆಗಳನ್ನು ದೇವಸ್ಥಾನದ ಇಒ ಆಗಿರುವ ತಹಸೀಲ್ದಾರ್ ಧನಂಜಯ ಮಾಲಗಿತ್ತಿ ಸಮ್ಮುಖದಲ್ಲಿ ಎಣಿಕೆ ಮಾಡಲಾಯಿತು. 40 ದಿನಗಳಲ್ಲಿ 3,18,585 ರೂ. ಸಂಗ್ರಹವಾಗಿದ್ದು, ಕರ್ನಾಟಕ ಗ್ರಾಮೀಣ ಬ್ಯಾಂಕ್‌ಗೆ ಜಮೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಕಾಣಿಕೆಗೆ ಡಿಜಿಟಲ್ ವ್ಯವಸ್ಥೆ: ಕನಕಾಚಲಪತಿಯ ಸೇವಾ ಕಾರ್ಯಗಳಿಗೆ ಡಿಜಿಟಲ್ ಪೇಮೆಂಟ್ ಮೂಲಕ ಹಣ ಸಂದಾಯ ಮಾಡಲು ಇ-ಹುಂಡಿ ತೆರೆಯಲಾಯಿತು. ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ಜಿಲ್ಲಾ ಪ್ರಾದೇಶಿಕ ಪ್ರಬಂಧಕ ಎಂ.ಗುರುಪ್ರಸಾದರಾವ್ ಮಾತನಾಡಿ, ಭಕ್ತರು ಇ-ಹುಂಡಿ ಕ್ಯೂಆರ್ ಕೋಡ್‌ನಿಂದ ನೇರವಾಗಿ ದೇವಸ್ಥಾನದ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಿ ಸೇವೆ ಸಲ್ಲಿಸಬಹುದು ಎಂದರು. ಬ್ಯಾಂಕ್‌ನ ಮುಖ್ಯಸ್ಥರ ಜತೆ ಚರ್ಚಿಸಿ ದೇವಸ್ಥಾನಕ್ಕೆ ಬರುವ ಭಕ್ತರಿಗಾಗಿ ನೀರು ಶುದ್ದೀಕರಣ ಯಂತ್ರ ನೀಡುವುದಾಗಿ ಭರವಸೆ ನೀಡಿದರು. ದೇವಸ್ಥಾನದ ಸಿಬ್ಬಂದಿ ಸಿದ್ದಲಿಂಗಯ್ಯಸ್ವಾಮಿ, ಬ್ಯಾಂಕ್‌ನ ಹಿರಿಯ ವ್ಯವಸ್ಥಾಪಕ ಬಂದೇನವಾಜ್ ಮುಲ್ಲಾ, ವ್ಯವಸ್ಥಾಪಕರಾದ ವೀರೇಶ ಕೂಲಿ, ಪಂಪಾಪತಿ ಗಾಣಿಗೇರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net