ಕನಕಗಿರಿಯ ಕನಕಾಚಲ ದೇವಸ್ಥಾನ ಹುಂಡಿ ಎಣಿಕೆ

Kanakagiri Temple hundi amount
ಕನಕಗಿರಿಯ ಕನಕಾಚಲ ದೇವಸ್ಥಾನದಲ್ಲಿ ಕಾಣಿಕೆ ಹಣದ ಎಣಿಕೆ ಕಾರ್ಯ ನಡೆಯಿತು. ಕಂದಾಯ ನಿರೀಕ್ಷಕ ಮಂಜುನಾಥ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಾಗರಾಜ ತೆಗ್ಯಾಳ ಇತರರಿದ್ದರು.
Published on

ಕನಕಗಿರಿ: ಇಲ್ಲಿನ ಕನಕಾಚಲ ದೇವಸ್ಥಾನದಲ್ಲಿ ಗುರುವಾರ ಕಾಣಿಕೆ ಪೆಟ್ಟಿಗೆಗಳನ್ನು ಎಣಿಕೆ ಮಾಡಲಾಗಿದ್ದು, 2,09,295 ರೂ. ಕಾಣಿಕೆ ಸಂಗ್ರಹವಾಗಿದೆ.

ನಲವತ್ತು ದಿನದ ನಂತರ ಹುಂಡಿ ಎಣಿಕೆ ಮಾಡಲಾಗಿದೆ. ತಹಸೀಲ್ದಾರ್ ಕಚೇರಿಯ ಶಿರಸ್ತೇದಾರ್ ಅನಿತಾ ಇಂಡಿ ನೇತೃತ್ವದಲ್ಲಿ ನಡೆದ ಕಾಣಿಕೆ ಪೆಟ್ಟಿಗೆಗಳ ಹಣ ಎಣಿಕೆ ಕಾರ್ಯ ನಡೆಯಿತು.

ಜಾತ್ರೆ ಹಿನ್ನೆಲೆಯಲ್ಲಿ ಕಾಣಿಕೆ ಪೆಟ್ಟಿಗೆಗಳನ್ನು ಎಣಿಕೆ ಮಾಡಲಾಗಿದೆ ಎಂದು ದೇವಸ್ಥಾನ ವ್ಯವಸ್ಥಾಪನಾ ಸಮಿತಿ ತಿಳಿಸಿದೆ. ಸಂಗ್ರಹವಾದ ಹಣವನ್ನು ದೇವಸ್ಥಾನದ ಖಾತೆಗೆ ಜಮೆ ಮಾಡಲಾಯಿತು. ಸಮಿತಿ ಕಾರ್ಯದರ್ಶಿ ಸಿದ್ದಲಿಂಗಯ್ಯಸ್ವಾಮಿ, ವಿಜಯ, ವೀರೇಶ ತೆಗ್ಗಿನಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net