

ಕನಕಗಿರಿ: ಪಟ್ಟಣದ ಐತಿಹಾಸಿಕ ಕನಕಾಚಲ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದ ಕಾಣಿಕೆ ಪೆಟ್ಟಿಗೆಗಳನ್ನು ಶುಕ್ರವಾರ ಎಣಿಕೆ ಮಾಡಲಾಗಿದ್ದು, 15 ದಿನಗಳಲ್ಲಿ 6, 93, 820 ರೂ. ಸಂಗ್ರಹವಾಗಿದೆ.
ಶಿರಸ್ತೇದಾರ್ ಅನಿತಾ ಇಂಡಿ ನೇತೃತ್ವದಲ್ಲಿ ಎಣಿಕೆ ಕಾರ್ಯ ನಡೆಯಿತು. ಜಾತ್ರೆಗೆ ಮುನ್ನ ಕಾಣಿಕೆ ಪೆಟ್ಟಿಗೆ ದೇಣಿಗೆಯನ್ನು ಎಣಿಕೆ ಮಾಡಲಾಗಿತ್ತು. ಸಂಗ್ರಹವಾದ ಕಾಣಿಕೆ ಹಣವನ್ನು ದೇವಸ್ಥಾನದ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ ಎಂದು ದೇವಸ್ಥಾನ ಸಮತಿ ತಿಳಿಸಿತು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಾಗರಾಜ ತೆಗ್ಗಿಹಾಳ, ಸದಸ್ಯರಾದ ಕೀರ್ತಿ ಸೋನಿ, ವೆಂಕಟೇಶ್ ಸೌದ್ರಿ, ವೀರೇಶ ತೆಗ್ಗಿನಮನಿ, ಪ್ರಮುಖರಾದ ಸುದರ್ಶನರೆಡ್ಡಿ, ಅಯ್ಯನಗೌಡ ರೆಡ್ಡಿ, ಕನಕರೆಡ್ಡಿ ಮಹಲಿನಮನಿ, ಸೋಮನಾಥ ಇತರರಿದ್ದರು.