

ಕನಕಗಿರಿ: ತಾಲೂಕಿನ ಕೆ.ಕಾಟಾಪುರ ಗ್ರಾಮದ ನಾಗರಾಜಗೌಡ 2024-25ನೇ ಸಾಲಿನ ಕಾನೂನು ಪದವಿಯಲ್ಲಿ ಕಾಲೇಜಿಗೆ ಪ್ರಥಮ ರ‌್ಯಾಂಕ್ ಪಡೆದು 4 ಚಿನ್ನದ ಪದಕ, 2 ಸ್ಕಾಲರ್‌ಶಿಪ್ ಪಡೆದಿದ್ದಾನೆ.
ನಾಗರಾಜಗೌಡ ಪಿಯುಸಿ ಬಳಿಕ 5 ವರ್ಷದ ಬಿ.ಎ. ಎಲ್‌ಎಲ್‌ಬಿ ಕಾನೂನು ಪದವಿಯನ್ನು ಕರ್ನಾಟಕ ವಿವಿ ವ್ಯಾಪ್ತಿ ಧಾರವಾಡದ ಸರ್ ಸಿದ್ದಪ್ಪ ಕಂಬಳಿ ಕಾನೂನು ವಿದ್ಯಾಲಯದಲ್ಲಿ ಅಧ್ಯಯನ ಮಾಡಿದ್ದಾನೆ.
ಮಂಗಳವಾರ ಧಾರವಾಡ ಕೆಯುಡಿಯಲ್ಲಿ ಆಯೋಜಿಸಿದ್ದ 74ನೇ ಘಟಿಕೋತ್ಸವದಲ್ಲಿ ಸಚಿವ ಡಾ.ಎಂ.ಸಿ ಸುಧಾಕರರಿಂದ ಚಿನ್ನದ ಪದಕ ಪಡೆದರು.