ಬಿರು ಬಿಸಿಲ್ಲೂ ದತ್ತಾಂಶ ಸಂಗ್ರಹ ಜೋರು

Survey
ಕನಕಗಿರಿಯ 17ನೇ ವಾರ್ಡಿನಲ್ಲಿ ಗಣತಿದಾರ ಶಿಕ್ಷಕರು ಮನೆಮನೆಗೆ ತೆರಳಿ ಮಾಹಿತಿ ಪಡೆಯುತ್ತಿರುವುದು. ಪಪಂ ಸದಸ್ಯರಾದ ಹನುಮಂತ ಬಸರಿಗಿಡ, ರಾಕೇಶ ಕಂಪ್ಲಿ ಇದ್ದರು.
Published on

ಕನಕಗಿರಿ: ನ್ಯಾ. ನಾಗಮೋಹನ್ ದಾಸ್ ಆದೇಶದನ್ವಯ ಎಸ್ಸಿ ಒಳ ಮೀಸಲಾತಿಗಾಗಿ ರಾಜ್ಯ ಸರ್ಕಾರ ನಡೆಸುತ್ತಿರುವ ಸಮೀಕ್ಷೆಯು ತಾಲೂಕಿನಾದ್ಯಂತ ಸೋಮವಾರದಿಂದ ಆರಂಭಗೊಂಡಿದೆ.

ಒಟ್ಟು 94 ಗಣತಿದಾರರು ಸಮೀಕ್ಷೆ ಕೈಗೊಂಡಿದ್ದು, 36 ಜನ ಮೇಲ್ವಿಚಾರಕರು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಐವರು ಮಾಸ್ಟರ್ ಟ್ರೈನರ್‌ಗಳು ಗಣತಿದಾರರಿಗೆ ತರಬೇತಿ ನೀಡಿದ್ದಾರೆ.

ತರಬೇತಿ ಪಡೆದ ಗಣತಿದಾರರು ತಮಗೆ ಹಂಚಿಕೆಯಾದ ಮನೆಗಳಿಗೆ ತೆರಳಿ ಮಾಹಿತಿ ಪಡೆಯುತ್ತಿರುವುದು ಸಹಜವಾಗಿದೆ. ಬಿರು ಬೇಸಿಗೆಯಲ್ಲೂ ಗಣತಿದಾರರು ತಮಗೆ ವಹಿಸಿದ ಕಾರ್ಯವನ್ನು ಆರಂಭಿಸಿದ್ದಾರೆ. ಮಂಗಳವಾರಕ್ಕೆ 2ನೇ ದಿನಕ್ಕೆ ಕಾಲಿಟ್ಟಿದೆ. ಮೇ 17ರವರೆಗೆ ಗಣತಿ ನಡೆಯಲಿದ್ದು, ಅಷ್ಟರಲ್ಲಿಯೇ ಗಣತಿ ಕಾರ್ಯ ಮುಗಿಯುವ ಸಾಧ್ಯತೆಯಿದೆ. ಗಣತಿದಾರರು ಮನೆಗಳಿಗೆ ಬಂದಾಗ ಸಾರ್ವಜನಿಕರು ಸರಿಯಾದ ಮಾಹಿತಿ ನೀಡಬೇಕೆಂದು ತಹಸೀಲ್ದಾರ್ ವಿಶ್ವನಾಥ ಮುರುಡಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net