ದೃಢ ವ್ಯಕ್ತಿತ್ವ ರೂಪಿಸಿಕೊಳ್ಳಿ

UDGHATANE
ಕನಕಗಿರಿಯ ಪಂಪಣ್ಣ ಶರಣಪ್ಪ ಗುಗ್ಗಳಶೆಟ್ರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಅಭಿವ್ಯಕ್ತಿ ಕೌಶಲ ಕುರಿತ ಉಪನ್ಯಾಸ ಕಾರ್ಯಕ್ರಮವನ್ನು ಕಾಲೇಜಿನ ಪ್ರಭಾರ ಪ್ರಾಚಾರ್ಯೆ ತಬಸ್ಸುಮ್ ಆರಾ ಉದ್ಘಾಟಿಸಿದರು. ಇರಕಲ್ಲಗಡದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ದಿವ್ಯಾ, ಡಾ.ವೀರೇಶ ಕೆಂಗಲ್, ಸಂಯೋಜಕ ಡಾ.ಆಶಿಕಾ.ಎಚ್.ಸಿ ಇತರರಿದ್ದರು.
Published on

ಕನಕಗಿರಿ: ಮಾನವನ ಅಭಿವ್ಯಕ್ತಿ ಅತನ ವ್ಯಕ್ತಿತ್ವ ರೂಪಿಸುತ್ತದೆ ಎಂದು ಇರಕಲ್ಲಗಡದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ದಿವ್ಯಾ ಹೇಳಿದರು.

ಪಟ್ಟಣದ ಪಂಪಣ್ಣ ಶರಣಪ್ಪ ಗುಗ್ಗಳ ಶೆಟ್ರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶ (ಐ.ಕ್ಯೂ.ಎ.ಸಿ) ಇಂಗ್ಲಿಷ್ ವಿಭಾಗದಿಂದ ನಡೆದ ಅಭಿವ್ಯಕ್ತಿ ಕೌಶಲಗಳು ಕುರಿತು ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದರು.

ಮನುಷ್ಯ ತನ್ನ ಇರುವಿಕೆ ಹಾಗೂ ಇಲ್ಲದಿರುವಿಕೆಯನ್ನು ಅಭಿವ್ಯಕ್ತಿಯಿಂದಲೇ ತೋರ್ಪಡಿಸಿಕೊಳ್ಳುತ್ತಾನೆ. ಮನೆ, ಕೆಲಸದ ಸ್ಥಳ, ಸಮಾಜ ಎಲ್ಲ ಸಂದರ್ಭಗಳಲ್ಲಿ ನಡವಳಿಕೆ ಮಹತ್ವದ ಪಾತ್ರವಹಿಸುತ್ತದೆ. ವಿದ್ಯಾರ್ಥಿಗಳು ಗಟ್ಟಿತನ ಹಾಗೂ ದೃಢ ವ್ಯಕ್ತಿತ್ವ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಐ.ಕ್ಯೂ.ಎ.ಸಿ. ಸಂಚಾಲಕರಾದ ಮರ್ವಿನ್ ಡಿಸೋಜಾ, ಪ್ರಭಾರ ಪ್ರಾಚಾರ್ಯೆ ತಬಸ್ಸುಮ್ ಆರಾ, ಐ.ಕ್ಯೂ.ಎ.ಸಿ. ಸಹಸಂಚಾಲಕ ಡಾ. ವೀರೇಶ ಕೆಂಗಲ್, ಸಂಯೋಜಕ ಡಾ.ಆಶಿಕಾ ಎಚ್.ಸಿ, ಸಹಾಯಕ ಪ್ರಾಧ್ಯಾಪಕ ಲಲಿತಾ, ಉಪನ್ಯಾಸಕ ಸೋಮಶೇಖರಪ್ಪ, ಬಸವರಾಜ, ಗೋಪಾಲ, ದೇವೇಂದ್ರಪ್ಪ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net