

ಕನಕಗಿರಿ: ಕಳೆದ ವಾರ ಸುರಿದ ಮಳೆಗೆ ನೆನೆದಿದ್ದ 9ನೇ ವಾರ್ಡ್‌ನ ಸುಳೇಕಲ್ ಓಣಿಯ ಖಾಸಿಂಬಿ ಬಳಿಗಾರ ಎನ್ನುವವರಿಗೆ ಸೇರಿದ ಮನೆ ಗುರುವಾರ ತಡರಾತ್ರಿ ಕುಸಿದು ಬಿದ್ದಿದ್ದು, ಅದೃಷ್ಟವಶಾತ್ ಮನೆ ಸದಸ್ಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮನೆ ಹಳೆಯದಾಗಿದ್ದು, ಕಳೆದ ವಾರ ಸುರಿದ ಮಳೆಗೆ ನೆನೆದಿದೆ. ಗುರುವಾರ ರಾತ್ರಿ ಈದ್ ಮಿಲಾದ್ ನಿಮಿತ್ತ ಮನೆಯಲ್ಲಿನ ನಾಲ್ವರು ಮನೆಯೊಳಗೆ ನಮಾಜ್ ಮಾಡಿ, ಜಾಗರಣೆ ಹಾಗೂ ಸಿಹಿ ಮಾಡಲೆಂದು ಹೊರಗಡೆ ಬಂದು ಕುಳಿತಿರುವಾಗ ತಡರಾತ್ರಿ 2 ಗಂಟೆಗೆ ಸುಮಾರಿಗೆ ಏಕಾಏಕಿ ಮನೆ ಕುಸಿದು ಬಿದ್ದಿದೆ.
ಗ್ರಾಮ ಲೆಕ್ಕಾಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಪರಿಶೀಲಿಸಿ, ಮೇಲಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು. | ರವಿ ಎಸ್.ಅಂಗಡಿ ತಹಸೀಲ್ದಾರ್ ಕನಕಗಿರಿ