ಪ್ರಸನ್ನ ವೀರಾಂಜನೇಯ ರಥೋತ್ಸವ ಅದ್ದೂರಿ

Untitled design (2)
Published on

ಕನಕಗಿರಿ: ತಾಲೂಕಿನ ಹಿರೇ ಮಾದಿನಾಳ ಗ್ರಾಮದ ಪ್ರಸನ್ನ ವೀರಾಂಜನೇಯ ದೇವರ ಜಾತ್ರೆ ನಿಮಿತ್ತ ಭಾನುವಾರ ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ರಥೋತ್ಸವವು ಸಡಗರದಿಂದ ಜರುಗಿತು.

ದೇವಸ್ಥಾನವನ್ನು ಸುಣ್ಣ ಬಣ್ಣ ಬಳಿದು, ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಭಾನುವಾರ ಬೆಳಗ್ಗೆ ದೇವರಿಗೆ ಪಂಚಾಮೃತ ಅಭಿಷೇಕ, ಹೂಗಳಿಂದ ಅಲಂಕಾರ ಮಾಡಲಾಗಿತ್ತು. ಭಕ್ತರು ದೇವರಿಗೆ ನೈವೇದ್ಯ ಅರ್ಪಿಸಿದರು. ಮಂತ್ರೋದ್ಘೋಷಗಳ ಪಠಣ ಸೇರಿ ನಾನಾ ಧಾರ್ಮಿಕ ಕಾರ್ಯಕ್ರಮಗಳು ಭಕ್ತರ ಸಮ್ಮುಖದಲ್ಲಿ ಜರುಗಿದವು. ಸಂಜೆ ತೇರಿಗೆ ಭಕ್ತರು ಹೂವಿನ ಹಾರ ಹಾಕಿದರು. ರಥೋತ್ಸವಕ್ಕೆ ನಂದಿಕೋಲು ಕುಣಿತ, ಬಾಜಾ-ಭಜಂತ್ರಿ, ತಾಷತಾಂಡೊಲ್ ಮೆರುಗು ನೀಡಿದವು. ಭಕ್ತರು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿ, ರಥಕ್ಕೆ ಹೂಹಣ್ಣು, ಉತ್ತತ್ತಿ ಅರ್ಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net