ಪಾಕಿಸ್ತಾನದ ಅಟ್ಟಹಾಸ ಮಟ್ಟ ಹಾಕಿ

torchlight procession
ಕನಕಗಿರಿ ಹಿಂದು ಜಾಗರಣ ವೇದಿಕೆಯಿಂದ ಬುಧವಾರ ರಾತ್ರಿ ಪಂಜಿನ ಮೆರವಣಿಗೆ ನಡೆಸಲಾಯಿತು. ಪ್ರಮುಖರಾದ ಪೃಥ್ವಿಕುಮಾರ್ ಮ್ಯಾಗೇರಿ, ಹನುಮೇಶ ಗಂಗಾಮತ, ಚೇತನ್ ಯಾದವ, ಕಿರಣ ಕುಮಾರ, ಸಂಪತ್ ಕುಮಾರ್, ಮಾರುತಿ ಗಂಗಾಮತ, ಶ್ರೀಕಾಂತ್ ಹಿಂದು , ರಾಮ,ಗೋವಿಂದ, ಶರಣಬಸವ ರಡ್ಡಿ ಇತರರಿದ್ದರು.
Published on

ಕನಕಗಿರಿ: ಕಾಶ್ಮೀರ ಪ್ರವಾಸಕ್ಕೆ ತೆರಳಿದವರನ್ನು ಗುರಿಯಾಗಿಸಿಕೊಂಡು ಹತ್ಯೆ ಮಾಡಿದ ಉಗ್ರಗಾಮಿಗಳನ್ನು ಹಾಗೂ ಅವರನ್ನು ಪೋಷಿಸುತ್ತಿರುವ ಪಾಕಿಸ್ತಾನದ ನಡೆಯನ್ನು ಖಂಡಿಸಿ ಹಿಂದು ಜಾಗರಣ ವೇದಿಕೆಯಿಂದ ಪಟ್ಟಣದಲ್ಲಿ ಬುಧವಾರ ಸಂಜೆ ಪಂಜಿನ ಮೆರವಣಿಗೆ ನಡೆಸಲಾಯಿತು.

ಜಿಲ್ಲಾ ಸಂಚಾಲಕ ಅಯ್ಯನಗೌಡ ರಡ್ಡಿ ಅಳ್ಳಳ್ಳಿ ಮಾತನಾಡಿ, ಜಾತಿ, ಭಾಷೆ, ರಾಜ್ಯ ಕೇಳದೆ ಧರ್ಮ ಕೇಳಿ, ಅವರ ಬಟ್ಟೆ ಬಿಚ್ಚಿಸಿ ಹಿಂದುವೆಂದು ತಿಳಿದ ಕೂಡಲೇ ಗುಂಡಿಟ್ಟು ಹತ್ಯೆಗೈದ ಉಗ್ರಗಾಮಿಗಳಿಗೆ ಪೋಷಿಸುತ್ತಿರುವ ಪಾಕಿಸ್ತಾನದ ಅಟ್ಟಹಾಸಕ್ಕೆ ಇತಿಶ್ರೀ ಆಡಬೇಕಿದೆ. ಎಷ್ಟೋ ಮಕ್ಕಳು ತಂದೆಯನ್ನು ಕಳೆದುಕೊಂಡು ಅನಾಥರಾಗಿದ್ದಾರೆ.

ತಮ್ಮ ಪತಿಯರನ್ನು ಉಗ್ರಗಾಮಿಗಳು ಕಣ್ಣೆದುರು ಗುಂಡಿಟ್ಟು ಹೊಡೆದಾಗ ಆಗಿರುವ ನೋವು, ಸಂಕಟವನ್ನು ಪತಿಯರನ್ನು ಕಳೆದುಕೊಂಡ ನಮ್ಮ ಸಹೋದರಿಯರು ಮರಿಯಬೇಕಾದರೆ ಉಗ್ರಗಾಮಿಗಳನ್ನು ಹಾಗೂ ಪೋಷಿತ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಬೇಕು ಎಂದರು.

ಹನುಮಂತರೆಡ್ಡಿ ಮಹಲಿನಮನಿ ಮಾತನಾಡಿದರು. ಮೇಲುಗಡೆ ಆಗಸಿ ಹನುಮಪ್ಪನ ದೇವಸ್ಥಾನದಿಂದ ರಾಜಬೀದಿಯ ಮೂಲಕ ವಾಲ್ಮೀಕಿ ವೃತ್ತದವರೆಗೂ ಪಂಜಿನ ಮೆರವಣಿಗೆ ನಡೆಸಲಾಯಿತು. ಉಗ್ರರ ಗುಂಡಿಗೆ ಬಲಿಯಾದವರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ಆಚರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net