ಇಷ್ಟದ ಕೆಲಸ ಮಾಡಿ ಹೃದಯ ಕಾಪಾಡಿ

HEART DAY
ಕನಕಗಿರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಹೃದಯ ದಿನ ಕಾರ್ಯಕ್ರಮದಲ್ಲಿ ಎನ್‌ಸಿಡಿ ವೈದ್ಯ ಶರಣಪ್ಪ ಮಾತನಾಡಿದರು. ಮಕ್ಕಳ ತಜ್ಞ ಡಾ. ಶರಣಬಸವ, ನೇತ್ರಾಧಿಕಾರಿ ಮುರ್ತುಜಾ ಸಾಬ್, ಡಾ. ಪವನ್‌ಕುಮಾರ್ ಇತರರಿದ್ದರು.
Published on

ಕನಕಗಿರಿ: ಪ್ರತಿ ಜೀವಿ ಜನಿಸಿದಾಗ ಪ್ರಾರಂಭವಾಗುವ ಮೊದಲ ಪ್ರಕ್ರಿಯೆಯೇ ಹೃದಯ ಬಡಿತ. ಹೃದಯ ಚನ್ನಾಗಿದ್ದರೆ ಎಲ್ಲ ಚಟುವಟಿಕೆಗಳು ಸುಗಮವಾಗಿ ನಡೆಯುತ್ತವೆ ಎಂದು ಸಮುದಾಯ ಆರೋಗ್ಯ ಕೇಂದ್ರದ ಎನ್‌ಸಿಡಿ ವೈದ್ಯ ಶರಣಪ್ಪ ಹೇಳಿದರು.

ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ಹೃದಯ ದಿನಾಚರಣೆಯಲ್ಲಿ ಮಾತನಾಡಿದರು. ಒತ್ತಡದ ಜೀವನದಲ್ಲಿ ಹೃದಯವನ್ನು ಕಡೆಗಣಿಸಲಾಗುತ್ತಿದೆ. ಇದನ್ನು ಆರೋಗ್ಯವಾಗಿಟ್ಟುಕೊಳ್ಳಲು ನಿತ್ಯ ಯೋಗ, ಧ್ಯಾನ, ವ್ಯಾಯಾಮ ಜತೆಗೆ ಉತ್ತಮ ಆಹಾರ ಸೇವನೆ ಮಾಡಬೇಕು. ಆಸಕ್ತಿದಾಯಕ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಹೃದಯ ಸಮಸ್ಯೆಗಳಿಂದ ದೂರವಿರಬಹುದು ಎಂದರು.

ಮಕ್ಕಳ ತಜ್ಞರಾದ ಡಾ. ಶರಣಬಸವ, ನೇತ್ರಾಧಿಕಾರಿ ಮುರ್ತುಜಾ ಸಾಬ್ ಮಾತನಾಡಿದರು. ಡಾ. ಪವನ್ ಕುಮಾರ ಕಾರ್ಯಕ್ರಮ ಉದ್ಘಾಟಿಸಿದರು. ಸಿಬ್ಬಂದಿ ಮಲ್ಲೇಶಪ್ಪ, ಸಿದ್ದರಾಮಪ್ಪ, ರಮೇಶ್ ಶಿಲ್ಪಾ, ಸಂತೋಷ್ ಕುಮಾರ್, ಅಮೀನ್ ಸಾಬ್, ಸೋಮನಾಥ, ಚಿರಂಜೀವಿ, ಶರತ್‌ಕುಮಾರ್, ಸಮೀರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net