ದೈವ ಸ್ಮರಣೆಯಿಂದ ಇಷ್ಟಾರ್ಥ ಸಿದ್ಧಿ

KIRTHANE
ಕನಕಗಿರಿಯ ಪಾಂಡುರಂಗ ದೇವಸ್ಥಾನದಲ್ಲಿ ಶುಕ್ರವಾರ ರಾತ್ರಿ ನಡೆದ ಕಾರ್ಯಕ್ರಮದಲ್ಲಿ ಹರಿಭಕ್ತ ಪಂಡಿತ ಜಿ.ಪಿ. ರಾವ್ ಕೀರ್ತನೆ ನಡೆಸಿಕೊಟ್ಟರು. ಪ್ರಮುಖರಾದ ಸುರೇಶ ಬೊಂದಾಡೆ, ಪುಂಡಲೀಕ ಬೊಂದಾಡೆ ಇತರರಿದ್ದರು.
Published on

ಕನಕಗಿರಿ: ಶುದ್ಧ ಮನಸ್ಸಿನಿಂದ ದೇವರ ಸ್ಮರಣೆ ಮಾಡಿದರೆ ಇಷ್ಟಾರ್ಥಗಳು ಈಡೇರಲಿವೆ ಎಂದು ಹರಿಭಕ್ತ ಪಂಡಿತ ಜಿ.ಪಿ. ರಾವ್ ಹೇಳಿದರು.

ಇಲ್ಲಿನ ಕಲಕೇರಿ ರಸ್ತೆಯ ಶ್ರೀ ಪಾಂಡುರಂಗ ದೇವಸ್ಥಾನದ 12ನೇ ವರ್ಷದ ವಾರ್ಷಿಕೋತ್ಸವದ ಕೀರ್ತನನೆ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು. ಮನುಷ್ಯನ ಇಷ್ಟಾರ್ಥಗಳ ಸಿದ್ಧಿತೆ ಭಗವಂತನ ನಾಮಸ್ಮರಣೆಯೊಂದೆ ಸಾಕು. ಇನ್ನೊಬ್ಬರಿಗೆ ಕೆಡಕು ಬಯಸದೆ ಭಗವಂತನನ್ನು ಸ್ಮರಿಸಿದರೆ ನಮ್ಮ ಬೇಡಿಕೆಗಳು ಸಿದ್ಧಿಯಾಗಲಿವೆ. ದೇವರ ನಾಮಸ್ಮರಣೆಯಲ್ಲಿ ಎಲ್ಲವೂ ಅಡಗಿದ್ದು, ನಿರಂತರ ಸೇವೆಯಿಂದ ಒಳ್ಳೆಯ ಫಲ ಸಿಗಲಿದೆ ಎಂದರು.

ಮನುಷ್ಯ ಅಹಂಕಾರ, ಹಣದಿಂದ ದೂರವಿರಬೇಕು. ದಾನ ಧರ್ಮದ ಮೂಲಕ ಒಳ್ಳೆಯ ಕೆಲಸಗಳನ್ನು ಮಾಡಬೇಕು. ದೇವರ ಸೇವೆಯಲ್ಲಿ ತೊಡಗಿಸಿಕೊಂಡು ಜನ್ಮ ಸಾರ್ಥವಾಗಿಸಿಕೊಳ್ಳಬೇಕು ಎಂದು ಹೇಳಿದರು.

ಹೊಸಪೇಟೆಯ ಪಾಂಡುರಂಗ ಭಜನಾ ಕಲಾವಿದರಿಂದ ಭಜನೆ, ಪಾರಾಯಣ, ಸಂತ ತುಕರಾಮ್, ಪಾಂಡುರಂಗ ರುಕ್ಮಿಣಿಯರ ಸ್ತುತಿ ನಡೆಯಿತು. ಅಭಿಷೇಕ, ನೈವೇದ್ಯ, ಪುಷ್ಪ, ತುಳಸಿ ಅರ್ಚನೆ, ಕಾಕಡಾರತಿ ಸೇವೆ ಜರುಗಿತು. ರಾಘವೇಂದ್ರಸ್ವಾಮಿ ಭಜನಾ ಮಂಡಳಿಯವರಿಂದ ಭಜನೆ ನಡೆಯಿತು.

ಪ್ರಮುಖರಾದ ಪುಂಡಲೀಕಪ್ಪ ಧಾಯಿಪುಲ್ಲೆ, ಸುರೇಶ ಬೊಂದಾಡೆ, ಅಂಬೋಜಿರಾವ್ ಬೊಂದಾಡೆ, ರಮೇಶ ಅಚ್ಚಲಕರ, ಮೋಹನ್ ಅಚ್ಚಲಕರ, ಉದಯ ದೇವಗಿರಿಕರ್, ಸಂತ್ರಾಮಪ್ಪ ಲೋಕರೆ, ಯಮನೂರಪ್ಪ ಬಿ, ಚಂದ್ರಕಾಂತ ಬಾಸುತ್ಕರ್, ನಾರಾಯಣರಾವ್ ಘನಾತೆ, ಶಶಿಧರ ಬೊಂದಾಡೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net