ಹನುಮ ಮಾಲಾಧಾರಿಗಳಿಗೆ ಗುಂಡೆತ್ತುವ ಸ್ಪರ್ಧೆ

Kanakagiri Gundu Lift
ಕನಕಗಿರಿ ಪಟ್ಟಣದ ಶ್ರೀ ತೊಂಡಿತೇವರಪ್ಪ ದೇವಸ್ಥಾನ ಆವರಣದಲ್ಲಿ 130 ಕೆ.ಜಿ ಗುಂಡು ಎತ್ತುವ ಸ್ಪರ್ಧೆಯಲ್ಲಿ ಹನುಮ ಮಾಲಾಧಾರಿಯೊಬ್ಬರು ಗುಂಡು ಎತ್ತಿ ಸಾಹಸ ಮಾಡುತ್ತಿರುವುದು.
Published on

ಕನಕಗಿರಿ: ಹನುಮಮಾಲೆ ಧರಿಸಿ ವ್ರತಾಚರಣೆ ಮಾಡುತ್ತಿರುವ ಹನುಮನ ಭಕ್ತರಿಗೆ ಮಂಗಳವಾರ ಪಟ್ಟಣದ ತೊಂಡಿತೇರಪ್ಪ ದೇವಸ್ಥಾನದಲ್ಲಿ ಗುಂಡು ಎತ್ತುವ ಸ್ಪರ್ಧೆ ನಡೆಯಿತು.

ಏ.6ರಂದು ನಡೆಯುವ ಹನುಮ ಜಯಂತಿ ನಿಮಿತ್ತ ಪಟ್ಟಣ ಸೇರಿ ಸುತ್ತಲಿನ ಗ್ರಾಮಗಳ ನೂರಾರು ಭಕ್ತರು ಸೋಮವಾರದವರೆಗೂ ಮಾಲೆ ಧರಿಸಿ, ವ್ರತಾಚರಣೆಗೆ ಮುಂದಾಗಿದ್ದು, ಮಾಲಾಧಾರಿಗಳಿಗಾಗಿ ಹನುಮ ಮಾಲಾ ಸೇವಾ ಸಮಿತಿಯಿಂದ 130 ಕೆಜಿ ಗುಂಡು, ಸಿಂಗ್ರಾಣಿ ಕಲ್ಲೆತ್ತುವ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು.

ಮಾಲಾಧಾರಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡು ಗುಂಡು ಎತ್ತುವ ಮೂಲಕ ಪೂರ್ವಜರ ಸಂಪ್ರದಾಯವನ್ನು ನೆನಪಿಸಿದರು. ಸುತ್ತಲೂ ನೆರೆದಿದ್ದ ಮಾಲಾಧಾರಿಗಳು ಸ್ಪರ್ಧಾಳುಗಳಿಗೆ ಚಪ್ಪಾಳೆ, ಕೇಕೆಯ ಮೂಲಕ ಪ್ರೋತ್ಸಾಹಿಸಿದರು.

ಸ್ಪರ್ಧೆಯಲ್ಲಿ ಗೆದ್ದವರಿಗೆ ಸಮಿತಿಯಿಂದ ಗೌರವಿಸಲಾಯಿತು. ಮಾಲಧಾರಿಗಳಾದ ಅಯ್ಯನಗೌಡ, ಗೋಪಿನಾಥ ಗೊಂದಳೆ, ಅಜಯಕುಮಾರ, ತಿಮ್ಮಣ್ಣ ಗಂಗಾಮತ, ಸಂಪತ್ ಕುಮಾರ, ಪ್ರಶಾಂತ ಹಡಪದ, ಕಿರಣ ಹಳ್ಳಿಕೇರಿ, ಬಸವರಾಜ ಪರ್ತಮಲ್ಲಯ್ಯ, ಶರಣಪ್ಪ, ವಿಶ್ವನಾಥ ಬೈಲಕ್ಕಂಪುರ, ರವಿಕುಮಾರ ಅಂಬಿಗ, ಪ್ರಲ್ಹಾದ ರೆಡ್ಡಿ ಮಾದಿನಾಳ, ಭೀಮಣ್ಣ ಗಂಗಾಮತ, ವಿಜಯಕುಮಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net