ಸುಳಾದಿ ಅರ್ಥೈಸಿದ ಶ್ರೀಶ ವಿಠಲದಾಸರು; ವಂಶಸ್ಥ ಕೆ.ಎಚ್.ಕುಲಕರ್ಣಿ ಅಭಿಮತ

02012022 Kanakagiri Srish vittal aaradhane
Published on

ಕನಕಗಿರಿ: ಶ್ರೀನಿವಾಸ ದೇವರ ಅನುಗ್ರಹಕ್ಕೆ ಪಾತ್ರರಾಗಿದ್ದ ಗುರು ಶ್ರೀಶ ವಿಠಲದಾಸರು, ಹಲವಾರು ಸುಳಾದಿ, ಉಗಾಭೋಗಗಳನ್ನು ಜನಸಾಮಾನ್ಯರಿಗೆ ಅರ್ಥವಾಗುವ ಹಾಗೆ ರಚಿಸಿದರು ಎಂದು ಗುರು ಶ್ರೀಶ ವಿಠಲದಾಸರ ವಂಶಸ್ಥ ಕೆ.ಎಚ್.ಕುಲಕರ್ಣಿ ಹೇಳಿದರು.

ಪಟ್ಟಣದ ರಾಘವೇಂದ್ರಸ್ವಾಮಿ ಮಠದಲ್ಲಿ ಶ್ರೀಗುರು ಶ್ರೀಶ ವಿಠಲ ಪ್ರತಿಷ್ಠಾನ ಜೀವಂತಿಕೆಯಿಂದ ಭಾನುವಾರ ಹಮ್ಮಿಕೊಂಡಿದ್ದ ಶ್ರೀಶ ವಿಠಲರ 176ನೇ ಆರಾಧನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಹರಿದಾಸ ಸಾಹಿತ್ಯಕ್ಕೆ ತಮ್ಮದೇ ಆದ ವಿಶಿಷ್ಟ ಕೊಡುಗೆ ನೀಡಿದ ವಿಜಯದಾಸರು, ಗೋಪಾಲದಾಸರು ಹಾಗೂ ಜಗನ್ನಾಥ ದಾಸರ ಸಮಕಾಲೀನವರಾದ ಶ್ರೀಶ ವಿಠಲದಾಸರು ಕುಂಟೋಜಿ ದಾಸರೆಂದೇ ಪ್ರಸಿದ್ಧಿಯಾಗಿದ್ದು, ಕನಕಗಿರಿಯವರು ಎಂಬುದೇ ಹೆಮ್ಮೆ. ಇವರ ವಂಶಸ್ಥರು ಕನಕಗಿರಿ ಸೇರಿದಂತೆ ಕಂಪ್ಲಿ, ಬಳ್ಳಾರಿಯಲ್ಲಿ ಹೆಚ್ಚಾಗಿ ನೆಲೆಸಿದ್ದಾರೆ ಎಂದರು.

ಆರಾಧನಾ ಅಂಗವಾಗಿ ದಾಸರ ಭಾವಚಿತ್ರಕ್ಕೆ ಹೂಗಳಿಂದ ಸಿಂಗರಿಸಿ, ರಾಜಬೀದಿಯಲ್ಲಿ ಮೆರವಣಿಗೆ ಮಾಡಲಾಯಿತು. ಸಿಂಧನೂರಿನ ಶ್ರೀ ರಾಮಚಂದ್ರ ಭಜನಾ ಮಂಡಳಿ ಹಾಗೂ ಗಂಗಾವತಿಯ ವಿಜಯದಾಸ ಭಕ್ತ ಮಂಡಳಿಯಿಂದ ಬೃಹತ್ ಶೋಭಾಯಾತ್ರೆ ನಡೆಯಿತು. ಪ್ರತಿಷ್ಠಾನ ಪದಾಧಿಕಾರಿಗಳಾದ ಟಿ.ವೆಂಕಟೇಶ ಕುಲಕರ್ಣಿ, ಭೀಮಸೇನ ಜೋಶಿ, ಎಂ.ಭೀಮರಾವ್ ಕುಲಕರ್ಣಿ, ಭೀಮಸೇನ ತಿಪ್ಪನಾಳ, ಗೋಪಾಲಕೃಷ್ಣ ರಾಜಪುರೋಹಿತ, ಗುರುರಾಜ ಕನ್ನೇರಮಡು, ಧನಂಜಯ, ಮಧು, ಮಂಜುನಾಥ, ಶ್ಯಾಮಸುಂದರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net