ಗುಡುದೂರಿನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ: ಗೋವಿಗೆ ವಿಶೇಷ ಪೂಜೆ, ಗಂಗೆಸ್ಥಳ ಮೆರವಣಿಗೆ

050922 Gudaduru Srikrishna Janmastami
ಗುಡುದೂರಿನಲ್ಲಿ ಸೋಮವಾರ ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ತ ಭಾವಚಿತ್ರ-ಗಂಗೆಸ್ಥಳ ಮೆರವಣಿಗೆ ನಡೆಯಿತು.
Published on

ಕನಕಗಿರಿ: ಗುಡುದೂರ ಗ್ರಾಮದಲ್ಲಿ ಯಾದವ ಸಮುದಾಯದಿಂದ ಸೋಮವಾರ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು.

ಗ್ರಾಮದ ಕೃಷ್ಣನ ಕಟ್ಟೆಯಲ್ಲಿ ಶ್ರೀಕೃಷ್ಣ ಭಾವಚಿತ್ರ ಹಾಗೂ ಗೋವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಮಹಿಳೆಯರು ಕುಂಭ ಕಳಸದೊಂದಿಗೆ ಗಂಗೆಸ್ಥಳಕ್ಕೆ ಹೋಗಿ ಬಂದರು. ಭಕ್ತರಿಗೆ ಅನ್ನ ಸಂತರ್ಪಣೆ ಬಳಿಕ ಸಂಜೆ ಶ್ರೀಕೃಷ್ಣನ ಭಾವಚಿತ್ರ ಮೆರವಣಿಗೆ ನಡೆಸಲಾಯಿತು. ಮಡಕೆ ಒಡೆಯುವ ಸ್ಪರ್ಧೆ ಗಮನ ಸೆಳೆಯಿತು. ಹುಲಿಗೆಮ್ಮ ಹೊಸಳ್ಳಿ ತಂಡದಿಂದ ಗೀಗಿ ಪದ ಕಾರ್ಯಕ್ರಮ ನಡೆಯಿತು.

ಪ್ರಮುಖರಾದ ಗಾಯತ್ರಿ ತಿಮ್ಮಾರಡ್ಡಿಗೌಡ, ಹಿರೇ ಹನುಮಂತಪ್ಪ ಮಂದ್ಲಾರ, ಕನಕಪ್ಪ ನರೇರ, ನಾಗಪ್ಪ ಬೊಗುಳಿ, ನರಿಯಪ್ಪ ಮಂದ್ಲಾರ, ಹುಚ್ಚಪ್ಪ ನರೇರ, ನಿಂಗಪ್ಪ ನರೇರ, ಮುತ್ತಪ್ಪ ನರೇರ, ಸಣ್ಣ ಯಂಕಪ್ಪ ಮಂದ್ಲಾರ, ಕೆರೆಗೌಡ ಗೌಡ್ರ, ಹನುಮಂತಪ್ಪ ವಕ್ರಾಣಿ, ಹಿರೇ ಬಾಲಪ್ಪ ವಕ್ರಾಣಿ, ಭೀಮನಗೌಡ ಗೌಡ್ರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net