ಶ್ರೀಕೃಷ್ಣ ಭಾವಚಿತ್ರ ಮೆರವಣಿಗೆ ಅದ್ದೂರಿ

SRIKRISHNA
ಕನಕಗಿರಿ ತಾಲೂಕಿನ ಗುಡುದೂರು ಗ್ರಾಮದಲ್ಲಿ ಕೃಷ್ಣ ಜಯಂತಿ ನಿಮಿತ್ತ ಕೃಷ್ಣನ ಭಾವಚಿತ್ರದೊಂದಿಗೆ ಗಂಗೆಸ್ಥಳಕ್ಕೆ ಪೂಜಿಸಿ ಮೆರವಣಿಗೆ ಮಾಡಲಾಯಿತು. ಪ್ರಮುಖರಾದ ನರಿಯಪ್ಪ ಮಂದಲಾರ, ಹಿರೇಹನುಮಂತ ಮಂದಲಾರ ಇತರರಿದ್ದರು.
Published on

ಕನಕಗಿರಿ: ತಾಲೂಕಿನ ಗುಡುದೂರು ಗ್ರಾಮದಲ್ಲಿ ಯಾದವ ಸಮಾಜದಿಂದ ಸೋಮವಾರ ಶ್ರೀಕೃಷ್ಣ ಜಯಂತಿಯನ್ನು ಸಡಗರದಿಂದ ಆಚರಿಸಲಾಯಿತು.

ಜಯಂತಿ ನಿಮಿತ್ತವಾಗಿ ಗ್ರಾಮದಿಂದ ಕೃಷ್ಣನ ಭಾವಚಿತ್ರ ಹಿಡಿದು ಡೊಳ್ಳು ವಾದ್ಯ, ಕುಂಭ ಕಳಸ ಗಂಗೆಸ್ಥಳ ಹೋಗಿ ಬರಲಾಯಿತು. ಗಂಗೆಸ್ಥಳದ ಮೆರವಣಿಗೆಯಲ್ಲಿ ಮಕ್ಕಳು ಕೃಷ್ಣನ ವೇಷ ಧರಿಸಿ ಗಮನ ಸೆಳೆದರು. ನಂತರ ಭಾಗವಹಿಸಿದ್ದವರಿಗೆ ಅನ್ನಪ್ರಸಾದ ನಡೆಯಿತು. ತರ ಸೊಸೈಟಿ ಮುಂದೆ ಹಮ್ಮಿಕೊಳ್ಳಲಾಗಿದ್ದ ಮಡಿಕೆ ಹೊಡೆಯುವ ಸ್ಪರ್ಧೆಯಲ್ಲಿ ಯುವಕರು ಭಾಗವಹಿಸಿದರು. ಸಂಜೆ ಕೃಷ್ಣ ಭಾವಚಿತ್ರ ಮೆರವಣಿಗೆ ಗ್ರಾಮದಲ್ಲಿ ನಡೆಯಿತು.

ಗ್ರಾಪಂ ಅಧ್ಯಕ್ಷ ಹಿರೇಹನುಮಂತ ಮಂದಲಾರ, ಪ್ರಮುಖರಾದ ಹನುಮಂತಪ್ಪ ಮ್ಯಾಗಡೆಮನಿ, ನರಸಪ್ಪ ಮಂತ್ರಿಕಿ, ನರಿಯಪ್ಪ ಮಂದಲಾರ, ಕನಕಪ್ಪ ಮಂದಲಾರ, ನಾಗಪ್ಪ ಬೊಗುಳಿ, ಹಿರೇ ಕನಕಪ್ಪ ನರೇರ, ಮಾಳಮ್ಮ ಗಣಂದ್ಲಾರ, ದುರ್ಗಮ್ಮ ನರೇರ, ಯಂಕಮ್ಮ ವಕ್ರಾಣಿ, ಯಂಕಮ್ಮ ಗೌಡ್ರ, ತಿಪ್ಪಮ್ಮ ಗೌಡ್ರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net