ಕರ ಸಂಗ್ರಹಿಸಿ ಪ್ರಗತಿ ಸಾಧಿಸಿ

knk-1
ಕನಕಗಿರಿ ತಾಪಂ ಸಭಾಂಗಣದಲ್ಲಿ ಮಂಗಳವಾರ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಇಒ ರಾಜಶೇಖರ, ಸಹಾಯಕ ನಿರ್ದೇಶಕರಾದ ವೀರಣ್ಣ ನಕ್ರಳ್ಳಿ, ಶರಪೂನ್ನಿಸಾ ಬೇಗಂ, ತಾಲೂಕು ಯೋಜನಾಧಿಕಾರಿ ಡಾ. ಹುಲಗಪ್ಪ ಇತರರಿದ್ದರು.
Published on

ಕನಕಗಿರಿ: ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳಿಂದ ತಮ್ಮ ವ್ಯಾಪ್ತಿಯಲ್ಲಿ ಕಡ್ಡಾಯವಾಗಿ ಪ್ರತಿದಿನ ಕರವಸೂಲಿ ಮಾಡಬೇಕು ಎಂದು ತಾಪಂ ಇಒ ಕೆ.ರಾಜಶೇಖರ ಹೇಳಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಪಿಡಿಒ, ಕರ ವಸೂಲಿಗಾರರು ಮತ್ತು ಡಿಇಒಗಳಿಗೆ ಮಂಗಳವಾರ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ತಾಲೂಕಿನಲ್ಲಿ ಕರ ಸಂಗ್ರಹ ಪ್ರಗತಿ ಕುಂಠಿತಗೊಂಡಿದ್ದು, ಕರವಸೂಲಿಗಾರರು ಪ್ರತಿದಿನ ಮನೆ ಮನೆ ಭೇಟಿ ನೀಡಿ, ಕರ ಸಂಗ್ರಹಿಸಿ ಪ್ರಗತಿ ಸಾಧಿಸಬೇಕೆಂದು ಸೂಚಿಸಿದರು.

ಗ್ರಾಪಂಗಳಲ್ಲಿ ಗ್ರಂಥಾಲಯಗಳನ್ನು ಸೂಕ್ತ ನಿರ್ವಹಣೆ ಜತೆಗೆ ಶುಚಿಯಾಗಿಟ್ಟುಕೊಳ್ಳಬೇಕು. ಎಲ್ಲ ಗ್ರಾಪಂಗಳಲ್ಲಿ ಕಡ್ಡಾಯವಾಗಿ ಕೂಸಿನ ಮನೆ ಇರಬೇಕು ಮತ್ತು ಸೂಕ್ತ ನಿರ್ವಹಣೆಯಾಗಬೇಕು ಎಂದ ಅವರು, ಎಸ್‌ಬಿಎಂ, ನರೇಗಾ ಹಾಗೂ ವಸತಿ ಯೋಜನೆ ಕುರಿತು ಪ್ರಗತಿ ಪರಿಶೀಲಿಸಿದರು.

ತಾಪಂ ಎಡಿ ಶರಪೂನ್ನಿಸಾ ಬೇಗಂ ಮಾತನಾಡಿ, ಎಲ್ಲ ಗ್ರಾಪಂಗಳಲ್ಲಿ ಮಹಿಳಾ ಭಾಗವಹಿಸುವಿಕೆ ಪ್ರಮಾಣ ಕಡಿಮೆಯಿದ್ದು, ಹೆಚ್ಚು ಮಹಿಳೆಯರಿಗೆ ಕೆಲಸ ಒದಗಿಸಬೇಕು. ನರೇಗಾ ಯೋಜನೆಯಡಿ ಕೂಲಿಕಾರರಿಗೆ ಕೆಲಸ ನೀಡಿದ ವೇಳೆ ಕಡ್ಡಾಯವಾಗಿ ಎರಡು ಬಾರಿ ಎನ್‌ಎಂಎಂಎಸ್ ಹಾಜರಿ ಹಾಕಿ, ಅದನ್ನು ಪರಿಶೀಲಿಸಿ ಪ್ರತಿನಿತ್ಯ ವರದಿಯನ್ನು ತಾಪಂಗೆ ಸಲ್ಲಿಸಲು ಸೂಚಿಸಿದರು.

ಎಡಿ ಸಹಾಯಕ ನಿರ್ದೇಶಕ ವೀರಣ್ಣ ನಕ್ರಳ್ಳಿ, ತಾಲೂಕು ಯೋಜನಾಧಿಕಾರಿ ಡಾ.ಹುಲುಗಪ್ಪ ಸೇರಿ ಪಿಡಿಒಗಳು, ಡಿಇಒಗಳು, ಕರ ವಸೂಲಿಗಾರರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net