ಪಡ ಭೂಮಿ ಹಂಚಿಕೆಗೆ ವಿರೋಧ

Kanakagiri Villagers manavi
ಹ್ಯಾಟಿ ಮೂಲದವರಿಗೆ ಸರ್ಕಾರಿ ಭೂಮಿ ಮಂಜೂರು ಮಾಡದಂತೆ ಆಗ್ರಹಿಸಿ ಬೈಲಕ್ಕುಂಪುರ, ಕನಕಾಪುರ ಗ್ರಾಮಸ್ಥರು ಕನಕಗಿರಿ ಗ್ರೇಡ್ 2 ತಹಸೀಲ್ದಾರ್ ವಿ.ಎಚ್. ಹೊರಪೇಟಿಗೆ ಸೋಮವಾರ ಮನವಿ ಸಲ್ಲಿಸಿದರು. ಪ್ರಮುಖರಾದ ಹನುಮಂತಗೌಡ, ಹನುಮಪ್ಪ, ವಿರುಪಣ್ಣ ಇತರರಿದ್ದರು.
Published on

ಕನಕಗಿರಿ: ಹ್ಯಾಟಿ ಮೂಲದವರಿಗೆ ಬೈಲಕ್ಕುಂಪುರ ಹಾಗೂ ಕನಕಾಪುರ ಸೀಮೆಯ ಸರ್ಕಾರಿ ಪಡ ಭೂಮಿ ಹಂಚಿಕೆ ಮಾಡುವುದನ್ನು ತಡೆಯಬೇಕೆಂದು ಆಗ್ರಹಿಸಿ ಅವಳಿ ಗ್ರಾಮಗಳ ಗ್ರಾಮಸ್ಥರು ಸೋಮವಾರ ಗ್ರೇಡ್ 2 ತಹಸೀಲ್ದಾರ್ ವಿ.ಎಚ್. ಹೊರಪೇಟಿಗೆ ಮನವಿ ಸಲ್ಲಿಸಿದರು.

ಕನಕಾಪುರದ ಮರಿಯಪ್ಪ ಹುಗ್ಗಿ ಮಾತನಾಡಿ, ನಮ್ಮ ಹಾಗೂ ಬೈಲಕ್ಕುಂಪುರ ಸೀಮೆಯಲ್ಲಿನ ಸರ್ಕಾರಿ ಪಡ ಭೂಮಿ ಎರಡೂ ಗ್ರಾಮಗಳ ರೈತರ ಜಾನುವಾರುಗಳನ್ನು ಮೇಯಿಸಲು ಅನುಕೂಲಕರವಾಗಿದೆಯಲ್ಲದೇ, ನೆರೆ ಬಂದಾಗ ವಸತಿ ಸ್ಥಾಪಿಸಲು ಯೋಗ್ಯವಾಗಿದೆ. ಆದರೆ, ಹ್ಯಾಟಿ ಮೂಲದವರಿಗೆ ಭೂಮಿ ಮಂಜೂರಿ ಮಾಡಲಾಗುತ್ತಿದೆ. ಅಲ್ಲದೇ, ಹಲವರು ಇಲ್ಲಿ ಬೆಳೆದಿದ್ದ ಹಲವು ಗಿಡ ಮರಗಳನ್ನು ಕಿತ್ತು ಸಾಗಣೆ ಮಾಡುವ ಮೂಲಕ ಪರಿಸರ ನಾಶ ಮಾಡುತ್ತಿದ್ದಾರೆ. ಇದರಿಂದ ಭವಿಷ್ಯದ ದಿನಗಳಲ್ಲಿ ಈ ಭಾಗದ ರೈತರ ಜಾನುವಾರುಗಳಿಗೆ ಮೇಯಿಸಲು ಜಾಗ ಇರದಂತಾಗುತ್ತದೆ. ಕೂಡಲೇ ಈ ಬಗ್ಗೆ ಪರಿಶೀಲಿಸಿ ಭೂಮಿ ಮಂಜೂರಿಗೆ ಅವಕಾಶ ನೀಡಬಾರದು ಎಂದು ಆಗ್ರಹಿಸಿದರು.

ಪ್ರಮುಖರಾದ ಹನುಮಂತಗೌಡ, ಹನುಮಪ್ಪ, ವಿರುಪಣ್ಣ, ನಾಗಲಿಂಗಪ್ಪ, ಅಂಬಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net