ಪ್ರಜಾಪ್ರಭುತ್ವ ಹಬ್ಬದಲ್ಲಿ ಪಾಲ್ಗೊಳ್ಳಿ

DHWAJAROHANA
ಕನಕಗಿರಿ ಪಪಂ ಮತಗಟ್ಟೆ ಕೇಂದ್ರದಲ್ಲಿ ಚುನಾವಣಾ ಪರ್ವ ದೇಶದ ಗರ್ವ ಧ್ವಜಾರೋಹಣವನ್ನು ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆ ನೆರವೇರಿಸಿದರು. ಸ್ವೀಪ್ ಸಮಿತಿ ಅಧ್ಯಕ್ಷರಾದ ಎಲ್.ವೀರೇಂದ್ರಕುಮಾರ್, ಬಿಎಲ್‌ಒಗಳಾದ ಶ್ಯಾಮೀದ್‌ಸಾಬ್ ಲೈನ್ದಾರ್, ರವೀಂದ್ರ ಬೊಂದಾಡೆ ಇತರರಿದ್ದರು.
Published on

ಕನಕಗಿರಿ: ಉತ್ತಮ ಅಭ್ಯರ್ಥಿ ಆಯ್ಕೆ ಮಾಡಲು ಎಲ್ಲರೂ ಮತಗಟ್ಟೆಗೆ ತೆರಳಿ ಹಕ್ಕು ಚಲಾಯಿಸಿ ಎಂದು ತಾಪಂ ಇಒ ಎಲ್. ವೀರೇಂದ್ರಕುಮಾರ್ ಹೇಳಿದರು.

ಪಪಂನ 75, 76ನೇ ಮತಗಟ್ಟೆ ಆವರಣದಲ್ಲಿ ತಾಲೂಕು ಸ್ವೀಪ್ ಸಮಿತಿ ನಮ್ಮ ನಡೆ ಮತಗಟ್ಟೆ ಕಡೆ ಜಾಗೃತಿ ಅಭಿಯಾನ ಅಂಗವಾಗಿ ಹಮ್ಮಿಕೊಂಡಿದ್ದ ಚುನಾವಣಾ ಪರ್ವ ದೇಶದ ಗರ್ವ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು.

ರಾಜ್ಯ ಚುನಾವಣಾ ಆಯೋಗದ ಆದೇಶದಂತೆ ತಾಲೂಕಿನ ಎಲ್ಲ 94 ಮತಗಟ್ಟೆಗಳ ಆವರಣದಲ್ಲಿ ಏಕಕಾಲಕ್ಕೆ ಧ್ವಜಾರೋಹಣ ನೆರವೇರಿಸಿದ್ದು, ಮತದಾನ ದಿನದವರೆಗೆ ಈ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದೆ. ಎಲ್ಲರೂ ಪ್ರಜಾಪ್ರಭುತ್ವ ಹಬ್ಬದಲ್ಲಿ ಪಾಲ್ಗೊಳ್ಳಿ ಎಂದು ಮನವಿ ಮಾಡಿದರು.

ಪಪಂ ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆ ಧ್ವಜಾರೋಹಣ ನೆರವೇರಿಸಿದರು. ಸಿಡಿಪಿಒ ವಿರೂಪಾಕ್ಷಿ, ಪಿಐ ಎಂ.ಡಿ ಫೈಜುಲ್ಲಾ, ತಾಪಂ ಸಹಾಯಕ ನಿರ್ದೇಶಕರಾದ ಚಂದ್ರಶೇಖರ್ ಕಂದಕೂರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net