ಮಹಾಲಕ್ಷ್ಮೀ ದೇವಿ ಜಾತ್ರೆ ಅದ್ದೂರಿ

Untitled design (15)
Published on

ಕನಕಗಿರಿ: ತಾಲೂಕಿನ ಘಡಿವಡಕಿ ಗ್ರಾಮದ ಮಹಾಲಕ್ಷ್ಮೀ ದೇವಿ ಜಾತ್ರೋತ್ಸವದ ನಿಮಿತ್ತ ಭಾನುವಾರ ಮಹಿಳೆಯರಿಂದ ರಥೋತ್ಸವ ಜರುಗಿತು. ಬ್ರಾಹ್ಮೀ ಮುಹೂರ್ತದಲ್ಲಿ ದೇವಿಗೆ ಮಹಾರುದ್ರಾಭೀಷೇಕ, ಕುಂಕುಮಾರ್ಚನೆ, ಅಲಂಕಾರ, ಎಲೆ ಚಟ್ಟು ಪೂಜೆ ನೆರವೇರಿತು. ನಂತರ ಅನ್ನಬಲಿ ನೀಡಲಾಯಿತು. ಭಕ್ತರು ದೀರ್ಘದಂಡ ನಮಸ್ಕಾರ, ನೈವೇದ್ಯ, ಕಾಣಿಕೆ ಅರ್ಪಿಸಿದರು. ಸಂಜೆ ತೇರು ಸಿದ್ಧವಾಗುತ್ತಿದ್ದಂತೆ ನೂರಾರು ಭಕ್ತರ ಹೂವಿನಹಾರ ಸಮರ್ಪಿಸಿದರು. ಭಕ್ತರು ಜೈಕಾರ ಹಾಕಿ, ಉತ್ತತ್ತಿ, ಬಾಳೆಹಣ್ಣು ಎಸೆದು ಭಕ್ತಿ ಮರೆದರು. ಆಕಳಕುಂಪಿ, ಡಂಕನಕಲ್, ಹಟ್ಟಿ, ಕಾಟಾಪುರ, ಜೀರಾಳ, ನವಲಿ, ಡಂಕಣಕಲ್, ಗುಡುದೂರು ಸೇರಿ ನಾನಾ ಗ್ರಾಮಗಳ ಭಕ್ತರು ನೆರೆದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net