

ಕನಕಗಿರಿ: ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶಾಲಾ ಪೂರ್ವ ಶಿಕ್ಷಣ ಚಟುವಟಿಕೆಗಳು ಭದ್ರ ಬುನಾದಿಯಾಗಿವೆ ಎಂದು ಕಲಿಕೆ ಟಾಟಾ ಟ್ರಸ್ಟ್‌ನ ಜಿಲ್ಲಾ ವ್ಯವಸ್ಥಾಪಕ ಅಶೋಕ ಹೇಳಿದರು.
ತಾಲೂಕಿನ ಗೌರಿಪುರದಲ್ಲಿ ಶಿಶು ಅಭಿವೃದ್ಧಿ ಯೋಜನೆ ಕನಕಗಿರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕಕ ಅಭಿವೃದ್ಧಿ ಮಂಡಳಿ ಹಾಗೂ ಕಲಿಕೆ ಟಾಟಾ ಟ್ರಸ್ಟ್ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬಾಲಮೇಳ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಕ್ಕಳ ಕಲಿಕೆಗೆ ಅಂಗನವಾಡಿ ಕೇಂದ್ರಗಳು ಸಹಕಾರಿ. ಪ್ರತಿ ಮಗುವಿನಲ್ಲಿ ಒಂದೊಂದು ಕಲೆ ಇರುತ್ತದೆ. ಅದನ್ನು ಗುರುತಿಸಲು ಬಾಲಮೇಳ ವೇದಿಕೆಯಾಗಿದೆ. ಇಂಥ ಕಾರ್ಯಕ್ರಮಗಳಿಗೆ ಸ್ಥಳೀಯ ಆಡಳಿತ ಮಂಡಳಿತ, ಪಾಲಕರು, ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದರು.
ಗ್ರಾಪಂ ಅಧ್ಯಕ್ಷ ವೆಂಕಟೇಶ್ ತೊಗರಿ ಮಾತನಾಡಿ, ಹೆತ್ತ ತಾಯಿ ಮೊದಲ ತಾಯಿಯಾದರೆ, ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳಿಗೆ ಎರಡನೇ ತಾಯಿಯಿದ್ದಂತೆ. ಮಕ್ಕಳ ಕಲಿಕೆಯಲ್ಲಿ ಅವರ ಪಾತ್ರ ಬಹುಮುಖ್ಯ. ಕಲಿಕೆೆ ಟಾಟಾ ಟ್ರಸ್ಟ್ ಕಾರ್ಯಕರ್ತೆಯರಿಗೆ ತರಬೇತಿ ನೀಡಿ ಮಕ್ಕಳಿಗೆ ಚಟುವಟಿಕೆ ನಡೆಸಲು ಅವಕಾಶ ಕಲ್ಪಿಸಿದ್ದು, ಸದ್ಬಳಕೆಯಾಗಬೇಕು ಎಂದು ತಿಳಿಸಿದರು.
ಗ್ರಾಪಂ ಸದಸ್ಯ ಬಸವರಾಜ, ಕಾರ್ಯದರ್ಶಿ ಶಿವರಾಜ್ ಪಾಟೀಲ್, ಮುಖಂಡರಾದ ಚನ್ನಯ್ಯ, ಮಾರುತಿ, ಕುಂಟೆಪ್ಪ, ಶಿವಪ್ಪ ತಳವಾರ, ಕಲಿಕೆ ಟಾಟಾ ಟ್ರಸ್ಟ್ ಸಂಪನ್ಮೂಲ ವ್ಯಕ್ತಿ ಸಿದ್ದಪ್ಪ ಕುರಿ, ವಲಯದ ಮೇಲ್ವಿಚಾರಕಿ ಚಂದ್ರಕಲಾ, ಪ್ರಮುಖರಾದ ರತ್ನಮ್ಮ ತೋಳದ, ಹನುಮಂತಪ್ಪ ಇತರರಿದ್ದರು.