ಅಂಗವಿಕಲರ ಕೊಠಡಿ ಉದ್ಘಾಟನೆ

knk=1
ಕನಕಗಿರಿ ತಾಲೂಕಿನ ಗೌರಿಪುರ ಗ್ರಾಮದ ಗ್ರಾಪಂ ಕಾರ್ಯಾಲಯವನ್ನು ಸಚಿವ ಶಿವರಾಜ ತಂಗಡಗಿ ಉದ್ಘಾಟಿಸಿದರು. ಸಂಸದ ರಾಜಶೇಖರ ಹಿಟ್ನಾಳ ಇದ್ದರು.
Published on

ಕನಕಗಿರಿ: ತಾಲೂಕಿನ ಗೌರಿಪುರ ಗ್ರಾಮದಲ್ಲಿ ನಿರ್ಮಿಸಿದ ರಾಜೀವ್ ಗಾಂಧಿ ಸೇವಾ ಕೇಂದ್ರ (ಗ್ರಾಪಂ ಕಟ್ಟಡ) ಗ್ರಂಥಾಲಯ, ಅಂಗನವಾಡಿ ಕೇಂದ್ರ ಹಾಗೂ ಅಂಗವಿಕಲರ ಕೊಠಡಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಭಾನುವಾರ ಉದ್ಘಾಟಿಸಿದರು.

ನಂತರ ಸುದ್ದಿಗಾರರ ಜತೆ ಮಾತನಾಡಿ, 2021-22ನೇ ಸಾಲಿನ ನರೇಗಾ ಯೋಜನೆಯಡಿ 28.50 ಲಕ್ಷ ರೂ. ವೆಚ್ಚದ ಗ್ರಾಪಂ ಕಟ್ಟಡ ನಿರ್ಮಿಸಲಾಗಿದ್ದು, ತಾಪಂ ಅನುದಾನದಲ್ಲಿ 4.90 ಲಕ್ಷ ರೂ. ವೆಚ್ಚದಲ್ಲಿ ಅಂಗವಿಕಲರ ಕೊಠಡಿ, 10 ಲಕ್ಷ ರೂ. ಅನುದಾನದಲ್ಲಿ ಗ್ರಂಥಾಲಯ ಹಾಗೂ 2022-23ನೇ ಸಾಲಿನಲ್ಲಿ ಅನುದಾನದಲ್ಲಿ ಅಂಗನವಾಡಿ ಕಟ್ಟಡ ನಿರ್ಮಿಸಿ ಉದ್ಘಾಟಿಸಲಾಗಿದ್ದು, ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದರು.

ಸಂಸದ ರಾಜಶೇಖರ ಹಿಟ್ನಾಳ, ಗ್ರಾಪಂ ಅಧ್ಯಕ್ಷ ವೆಂಕಟೇಶ ತೊಗರಿ, ಉಪಾಧ್ಯಕ್ಷೆ ಸರಸ್ವತಿ, ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ರೆಡ್ಡಿ ಶ್ರೀನಿವಾಸ, ತಾಪಂ ಇಒ ರಾಜಶೇಖರ, ಸಿಡಿಪಿಒ ವಿರೂಪಾಕ್ಷಿ, ಪ್ರಭಾರ ಪಿಡಿಒ ಹನುಮಂತಪ್ಪ ನಾಯಕ, ಪ್ರಮುಖರಾದ ಗಂಗಾಧರಸ್ವಾಮಿ ಕಲುಬಾಗಿಲಮಠ, ವೀರೇಶ ಸಮಗಂಡಿ, ಸಿದ್ದಪ್ಪ ನಿರ್ಲೂಟಿ, ಬಸವಂತಗೌಡ, ರಮೇಶ ನಾಯಕ, ಹನುಮೇಶ ಹುಳ್ಕಿಹಾಳ, ಸತ್ಯಪ್ಪ ಭೋವಿ, ಶರಣೇಗೌಡ, ಬೆಟ್ಟಪ್ಪ ಜೀರಾಳ ಇತರರಿದ್ದರು.

ಒಡೆದ ಕಾಂಪೌಂಡ್, ಅಂಗವಿಕಲರ ಕೊಠಡಿಗೆ ಬಾಗಿಲಿಲ್ಲ

ಸಚಿವ ಶಿವರಾಜ ತಂಗಡಗಿ ಹಾಗೂ ಸಂಸದ ರಾಜಶೇಖರ ಹಿಟ್ನಾಳ ಜಂಟಿಯಾಗಿ ಉದ್ಘಾಟಿಸಿದ ಅಂಗನವಾಡಿ ಕೇಂದ್ರ ನಿರ್ಮಾಣವಾಗಿ 2 ವರ್ಷ ಕಳೆದಿದ್ದು, ಕೆಲ ಕಾಮಗಾರಿ ಬಾಕಿ ಉಳಿದಿವೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಕಾಂಪೌಂಡ್ ಒಡೆದಿದ್ದು, ಅಂಗವಿಕಲರ ಕೊಠಡಿಗೆ ಬಾಗಿಲೇ ಇಲ್ಲವಾಗಿದೆ. ಇದನ್ನು ಗಮನಿಸದೇ ಸಚಿವ ಹಾಗೂ ಸಂಸದರು ಉದ್ಘಾಟಿಸಿ ಅನ್ಯ ಕಾರ್ಯಕ್ರಮಕ್ಕೆ ತೆರಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net