ಗಣೇಶೋತ್ಸವದ ಮೇಲಿನ ನಿರ್ಬಂಧ ತೆರವುಗೊಳಿಸುವಂತೆ ಹಿಂದು ಜಾಗರಣಾ ವೇದಿಕೆ ಮನವಿ

Kanakagiri Hindu Jagarana Vedike Appeal
ಅದ್ಧೂರಿ ಗಣೇಶೋತ್ಸವಕ್ಕೆ ಅನುಮತಿ ನೀಡಬೇಕೆಂದು ಆಗ್ರಹಿಸಿ ಹಿಂದು ಜಾಗರಣಾ ವೇದಿಕೆಯಿಂದ ಶಿರಸ್ತೇದಾರ ಗುರುರಾಜಗೆ ಗುರುವಾರ ಮನವಿ ಸಲ್ಲಿಸಲಾಯಿತು.
Published on

ಕನಕಗಿರಿ: ಸೆ.10ರಂದು ನಡೆಯುವ ಗಣೇಶೋತ್ಸವದ ಮೇಲೆ ಹೇರಿಕೆ ಮಾಡಲಾಗಿರುವ ನಿಬಂಧಗಳನ್ನು ತೆರವುಗೊಳಿಸಿ ಅದ್ದೂರಿ ಗಣೇಶೋತ್ಸವಕ್ಕೆ ಅವಕಾಶ ಮಾಡಿಕೊಡುವಂತೆ ಹಿಂದು ಜಾಗರಣಾ ವೇದಿಕೆ ಜಿಲ್ಲಾಧಿಕಾರಿಗೆ ಬರೆದ ಪತ್ರವನ್ನು ಶಿರಸ್ತೇದಾರ ಗುರುರಾಜಗೆ ಗುರುವಾರ ಸಲ್ಲಿಸಿತು.

ಆಡಳಿತ ಪಕ್ಷವು ಜನಾಶೀರ್ವಾದ ಯಾತ್ರೆಯಲ್ಲಿ ಜನರನ್ನು ಕೂಡಿಸುತ್ತಿದ್ದರೆ, ವಿರೋಧ ಪಕ್ಷವು ನಮ್ಮ ನಡೆ ಜನರ ಕಡೆ ಎಂದು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಇವುಗಳಿಂದ ಹರಡದ ಕರೊನಾ ನಾವು ಕೇವಲ ಗಣೇಶೋತ್ಸವ ಆಚರಣೆಯಿಂದ ಮಾತ್ರ ಹರಡುತ್ತದೆ ಎಂಬ ಊಹೆಯಿಂದ ಗಣೇಶೋತ್ಸವಕ್ಕೆ ನಿರ್ಬಂಧ ಹೇರಿಕೆ ಮಾಡಿರುವುದು ಖಂಡನೀಯ. ರಾಜಕೀಯ ಪಕ್ಷಗಳು ತಮಗೊಂದು ನ್ಯಾಯ, ಸಾಮಾನ್ಯ ಜನರಿಗೊಂದು ನ್ಯಾಯ ಎನ್ನುವಂತೆ ವರ್ತಿಸುತ್ತಿವೆ. ಇದು ದುರ್ದೈವದ ಸಂಗತಿಯಾಗಿದೆ. ಸ್ವಾತಂತ್ರ್ಯ ಪೂರ್ವದಿಂದಲೂ ಸಾರ್ವಜನಿಕವಾಗಿ ಆಚರಿಸಿಕೊಂಡು ಬಂದಿರುವ ಹಾಗೂ ಭಾವನಾತ್ಮಕ ಸಂಬಂಧ ಹೊಂದಿರುವ ಗಣೇಶೋತ್ಸವಕ್ಕೆ ಅವಕಾಶ ನೀಡಬೇಕೆಂದು ವೇದಿಕೆ ಆಗ್ರಹಿಸಿತು. ಪ್ರಮುಖರಾದ ಅಯ್ಯನಗೌಡ, ಬಸವರಾಜ ನಾಯಕ, ಶರಣಬಸವ, ಹೊಸಗೇರಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net