ಸಕ್ಕರೆ, ಮಾದಲಿಯ ನೈವೇದ್ಯ ಅರ್ಪಣೆ

Yamanuraswamy Urusu
ಕನಕಗಿರಿಯ ಯಮನೂರಪ್ಪ ಉರುಸು ನಿಮಿತ್ತ ಮಂಗಳವಾರ ರಾತ್ರಿಯಿಡಿ ನಡೆದ ಕಾರ್ಯಕ್ರಮದಲ್ಲಿ ಹೊಸಹಳ್ಳಿಯ ಹುಲಿಗೆಮ್ಮ ತಂಡ ಗೀಗಿ ಪದ ಪ್ರಸ್ತುತಪಡಿಸಿತು.
Published on

ಕನಕಗಿರಿ: ಭಾವೈಕ್ಯತೆಯ ಸಂಕೇತವಾದ ಪಟ್ಟಣದ 12ನೇ ವಾರ್ಡ್‌ನ ಯಮನೂರಸ್ವಾಮಿ (ಚಾಂಗದೇವ) ಉರುಸು ಬುಧವಾರ ಶ್ರದ್ಧಾಭಕ್ತಿಯಿಂದ ಜರುಗಿತು.

ಉರುಸು ನಿಮಿತ್ತ ಮಂಗಳವಾರ ರಾತ್ರಿಯಿಡಿ ಕಲಾವಿದೆ ಹೊಸಹಳ್ಳಿಯ ಹುಲಿಗೆಮ್ಮ ಕಲಾ ಬಳಗದಿಂದ ನಡೆದ ಗೀಗೀ ಪದಗಳು ನೆರದಿದ್ದವರ ಮನರಂಜಿಸಿದವು. ಬುಧವಾರ ಬೆಳಗಿನ ಜಾವ ಗಂಧಾಭಿಷೇಕ(ಸಂದಲ್) ನಿಮಿತ್ತ ವಿಜೃಂಭಣೆಯ ಮೆರವಣಿಗೆ ನಡೆಯಿತು.

ಯಮನೂರಸ್ವಾಮಿ ದರ್ಗಾದಿಂದ ಆರಂಭಗೊಂಡ ಮೆರವಣಿಗೆಯು ತೆಗ್ಗಿನಮನಿ, ದ್ಯಾಮವ್ವನಗುಡಿ, ರಾಜಬೀದಿಯ ಮೂಲಕ ದರ್ಗಾದವರೆಗೆ ನಡೆಯಿತು. ಉರುಸು ಪ್ರಯುಕ್ತ ಬುಧವಾರ ಭಕ್ತರು ತಂಡೋಪತಂಡವಾಗಿ ಸಕ್ಕರೆ, ಮಾದಲಿಯ ನೈವೇದ್ಯ ಅರ್ಪಿಸಿದರು. ದೀರ್ಘದಂಡ ನಮಸ್ಕಾರ, ಬೆಳ್ಳಿ ಕುದುರೆ, ಉಪ್ಪು ಸಮರ್ಪಣೆ ಮಾಡಿದರು.

ದಾಸೋಹ ಸಮಿತಿ ದರ್ಗಾವನ್ನು ನಾನಾ ಬಗೆಯ ಹೂವುಗಳಿಂದ ಅಲಂಕೃತಗೊಳಿಸಿತು. ಮೆರವಣಿಗೆಯುದ್ದಕ್ಕೂ ಸಿಡಿಸಿದ ಪಟಾಕಿಯ ಬಣ್ಣ ಬಣ್ಣದ ಚಿತ್ತಾರ ಆಕರ್ಷಿತವಾಗಿತ್ತು. ಭಕ್ತರಿಗೆ ಅನ್ನಪ್ರಸಾದ ನಡೆಯಿತು. ಕೆಪಿಎಸ್ ಪ್ರಾಚಾರ್ಯ ಅಮರೇಶ ದೇವರಾಳ, ಅರ್ಚಕರಾದ ಶರಣಪ್ಪ, ಪ್ರಮುಖರಾದ ಆನಂದ ಮಡಿವಾಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net