ಸಲಹಾ ಕೇಂದ್ರದ ಪ್ರಯೋಜನೆ ಪಡೆಯಿರಿ, ನ್ಯಾಯಾಧೀಶ ರಮೇಶ ಗಾಣಿಗೇರ ಸಲಹೆ

legal advice center inaugurated
ಕನಕಗಿರಿ ಸಿಡಿಪಿಒ ಕಚೇರಿಯಲ್ಲಿ ಉಚಿತ ಕಾನೂನು ಸಲಹಾ ಕೇಂದ್ರವನ್ನು ಹಿರಿಯ ಸಿವಿಲ್ ನ್ಯಾಯಾಧೀಶ ರಮೇಶ ಗಾಣಿಗೇರ ಉದ್ಘಾಟಿಸಿದರು. ಪ್ರಧಾನ ಸಿವಿಲ್ ನ್ಯಾಯಾಧೀಶ ನಾಗೇಶ ಪಾಟೀಲ್, ತಹಸೀಲ್ದಾರ್ ವಿಶ್ವನಾಥ ಮುರುಡಿ, ವಕೀಲರ ಸಂಘದ ಅಧ್ಯಕ್ಷ ಶರಣಬಸಪ್ಪ ನಾಯಕ ಇತರರಿದ್ದರು.
Published on

ಕನಕಗಿರಿ: ಆರ್ಥಿಕವಾಗಿ ಹಿಂದುಳಿದವರು ಮತ್ತು ನೊಂದವರಿಗೆ ನ್ಯಾಯ ಒದಗಿಸುವುದಕ್ಕಾಗಿ ಕಾನೂನು ಸೇವಾ ಪ್ರಾಧಿಕಾರ ಅಧಿನಿಯಮದಡಿ ಸಲಹಾ ಕೇಂದ್ರ ಆರಂಭಿಸಲಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ರಮೇಶ ಗಾಣಿಗೇರ ಹೇಳಿದರು.

ಪಟ್ಟಣದ ಸಿಡಿಪಿಒ ಕಚೇರಿಯಲ್ಲಿ ವಿವಿಧ ಇಲಾಖೆ ಆಶ್ರಯದಲ್ಲಿ ಮಂಗಳವಾರ ಏರ್ಪಡಿಸಿದ್ದ ಉಚಿತ ಕಾನೂನು ಸಲಹಾ ಕೇಂದ್ರ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದರು.

ಹಲವು ವರ್ಷಗಳಿಂದ ಪಟ್ಟಣದಲ್ಲಿ ಕಾನೂನು ಸಲಹಾ ಕೇಂದ್ರ ತೆರೆಯಬೇಕೆಂಬ ಉದ್ದೇಶವಿದ್ದು, ಇದೀಗ ಆರಂಭಗೊಂಡಿದೆ. ನೊಂದ ಪಜಾ, ಪಪಂ, ವೃದ್ಧರು ಹಾಗೂ ಮೂರು ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿದವರು ಸಲಹಾ ಕೇಂದ್ರದ ಪ್ರಯೋಜನೆ ಪಡೆಯಬಹುದು ಎಂದರು.

ತುಳಿತಕ್ಕೆ ಒಳಗಾದ ಹಾಗೂ ನೊಂದವರಿಗೆ ಈ ಸಲಹಾ ಕೇಂದ್ರದ ಮೂಲಕ ನ್ಯಾಯ ಒದಗಿಸಲಾಗುವುದು. ಕೌನ್ಸೆಲಿಂಗ್ ಮೂಲಕ ಸ್ಥಳೀಯವಾಗಿಯೇ ಸಮಸ್ಯೆ ಬಗೆಹರಿಸುವ ಕೆಲಸ ಮಾಡಲಾಗುತ್ತದೆ. ಹಿರಿಯ ವಕೀಲರ ಅವಶ್ಯವಿದ್ದಲ್ಲಿ ಕಾನೂನು ಸೇವಾ ಪ್ರಾಧಿಕಾರದ ಮೊರೆ ಹೋಗಿ ಕಾನೂನು ಸಲಹೆ ಪಡೆದುಕೊಳ್ಳಬಹುದು. ನೊಂದ, ತುಳಿತಕ್ಕೊಳಕಾದ, ನಾನಾ ಪ್ರಕರಣಗಳಲ್ಲಿ ಸಂತ್ರಸ್ತರಾದವರು ಈ ಸಲಹಾ ಕೇಂದ್ರವನ್ನು ಬಳಸಿಕೊಳ್ಳಬಹುದು ಎಂದು ತಿಳಿಸಿದರು.

ಪಪಂ ಅಧ್ಯಕ್ಷೆ ಹುಸೇನಬಿ ಚಳ್ಳಮರದ್, ಉಪಾಧ್ಯಕ್ಷ ಕಂಠಿರಂಗಪ್ಪ ನಾಯಕ, ಸಿಡಿಪಿಒ ವಿರೂಪಾಕ್ಷಿ, ವಕೀಲರ ಸಂಘದ ಉಪಾಧ್ಯಕ್ಷ ಪ್ರಕಾಶ ಕುಸಬಿ, ಸಂಘದ ಕಾರ್ಯದರ್ಶಿ ಮಂಜುನಾಥ, ಪ್ಯಾನೇಲ್ ವಕೀಲರಾದ ಶಿವಕುಮಾರ, ಪಪಂ ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net