ಕಾನೂನು ತಿಳಿದು ಮಾತನಾಡಲಿ ತಂಗಡಗಿ

26012020 Kanakagiri Basavaraj Dhadasaguru
Published on

ಕನಕಗಿರಿ: ಮಾಜಿ ಶಾಸಕ ಶಿವರಾಜ ತಂಗಡಗಿಗೆ ಕಾನೂನಿನ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ಕಾನೂನು ತಜ್ಞರಿಂದ ಮಾಹಿತಿ ಪಡೆದು ಸಿಎಎ ಬಗ್ಗೆ ಮಾತನಾಡಲಿ ಎಂದು ಶಾಸಕ ಬಸವರಾಜ ದಢೇಸುಗೂರು ಹೇಳಿದರು.

ಕ್ಷೇತ್ರದಲ್ಲಿ ಗಲಭೆ ಎಬ್ಬಿಸುವ ಕೆಲಸವನ್ನು ಮಾಜಿ ಶಾಸಕ ಶಿವರಾಜ ತಂಗಡಗಿ ಮಾಡುತ್ತಿದ್ದಾರೆ. ಕ್ಷೇತ್ರದಲ್ಲಿರುವ ಮುಸ್ಲಿಮರಿಗೆ ಸಿಎಎ ಬಗ್ಗೆ ಇಲ್ಲ ಸಲ್ಲದ ಸಂದೇಶ ನೀಡುತ್ತಿದ್ದಾರೆ. ಸಿಎಎ ಕಾಯ್ದೆಯು ದೇಶದ ಯಾವುದೇ ಮುಸ್ಲಿಮರನ್ನು ದೇಶದಿಂದ ಹೊರ ಹಾಕುವ ಉದ್ದೇಶವಿಲ್ಲ. ಸಿಎಎ ಬಗ್ಗೆ ಸರಿಯಾಗಿ ತಿಳಿದು ಮಾತನಾಡಬೇಕು. ರಾಜಕೀಯ ಲಾಭಕ್ಕಾಗಿ ತಂಗಡಗಿ ಹೊಸ ಆಟವನ್ನು ಶುರು ಮಾಡಿದ್ದಾರೆ. ಯಾವುದೇ ಕಾರಣಕ್ಕೂ ಕ್ಷೇತ್ರದ ಮುಸ್ಲಿಮರು ಆಂತಕ ಪಡುವ ಅವಶ್ಯಕತೆ ಇಲ್ಲ. ತೊಂದರೆಯಾದರೆ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅವರ ಬೆಂಬಲಕ್ಕೆ ನಾನು ಬೆನ್ನೆಲುಬಾಗಿ ನಿಲ್ಲುತ್ತೇನೆ. ಒಂದು ವೇಳೆ ತೊಂದರೆ ಆಗದಿದ್ದರೆ ತಂಗಡಗಿ ರಾಜಕೀಯವಾಗಿ ನಿವೃತ್ತ ಹೊಂದುತ್ತಾರಾ ಎಂದು
ಭಾನುವಾರ ಸುದ್ದಿಗೋಷ್ಠಿಯಲ್ಲಿ ಸವಾಲು ಹಾಕಿದರು.

ಮಂಡಲ ಅಧ್ಯಕ್ಷ ಮಹಾಂತೇಶ ಸಜ್ಜನ್, ಪ್ರಮುಖರಾದ ಡಾ.ದೊಡ್ಡಯ್ಯ ಅರವಟಗಿಮಠ, ಸಣ್ಣ ಕನಕಪ್ಪ, ವಾಗೇಶ ಹಿರೇಮಠ, ಶರತ್ಚಂದ್ರ ನಾಯಕ, ಅಮರಗುಂಡಪ್ಪ ತಗ್ಗಿನಮನಿ, ಡಾ.ದೇವರಾಜ, ಅಮರಪ್ಪ ಗದ್ದಿ, ರಂಗಪ್ಪ ಕೊರಗಟಗಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net