ಬೋನಿಗೆ ಬಿದ್ದ ಹೆಣ್ಣು ಚಿರತೆ

080322 Femail Leopard in Bone
ಬಸರಿಹಾಳದಲ್ಲಿ ಸೋಮವಾರ ತಡ ರಾತ್ರಿ ಬೋನಿಗೆ ಬಿದ್ದ ಚಿರತೆ.
Published on

ಕನಕಗಿರಿ: ಬಸರಿಹಾಳ ಹೊರವಲಯದಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಮತ್ತೊಂದು ಚಿರತೆ ಸೋಮವಾರ ತಡರಾತ್ರಿ ಬಿದ್ದಿದೆ. ಇದರ ವಯಸ್ಸು ಎರಡ್ಮೂರು ವರ್ಷದ್ದಾಗಿದೆ. ಸ್ಥಳಕ್ಕೆ ಇಲಾಖೆ ಸಿಬ್ಬಂದಿ, ಪಶು ವೈದ್ಯರು ಭೇಟಿ ನೀಡಿ ಆರೋಗ್ಯ ಪರಿಶೀಲಿಸಿದ್ದಾರೆ. ಅರಣ್ಯಕ್ಕೆ ಸ್ಥಳಾಂತರಿಸುವುದಕ್ಕಾಗಿ ಸೆರೆಯಾದ ಚಿರತೆಯನ್ನು ಗಂಗಾವತಿಯ ವಡ್ಡರಹಟ್ಟಿ ನರ್ಸರಿಗೆ ಕೊಂಡೊಯ್ಯಲಾಗಿದೆ. ಈ ಭಾಗದಲ್ಲಿ ಚಿರತೆಗಳು ಹೆಚ್ಚಾಗಿದ್ದು, ಗ್ರಾಮಸ್ಥರು ಇಲಾಖೆಗೆ ಮನವಿ ಸಲ್ಲಿಸಿದ್ದರು. ಜ.27ರಂದು ಬೋನು ಇರಿಸಲಾಗಿತ್ತು. ಫೆ.2ರ ತಡ ರಾತ್ರಿ ಮೂರ‌್ನಾಲ್ಕು ವರ್ಷದ ಹೆಣ್ಣು ಚಿರತೆ ಸೆರೆಯಾಗಿತ್ತು. ಇದೀಗ ಮತ್ತೊಂದು ಚಿರತೆ ಸಿಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net