ಮರವೇರಿ ಕುಳಿತಿದ್ದ ಚಿರತೆ ಮರಿ ಸೆರೆ

Kanakagiri baby leopad captuerd
ಕನಕಗಿರಿಯಲ್ಲಿ ಚಿರತೆ ಮರಿಯನ್ನು ಬೋನಿನಲ್ಲಿ ಸೆರೆ ಹಿಡಿದಿರುವುದು.
Published on

ಕನಕಗಿರಿ: ಪಟ್ಟಣದ ಬಂಕಾಪುರ ರಸ್ತೆಯಲ್ಲಿನ ಜಮೀನೊಂದರಲ್ಲಿ ಭಾನುವಾರ ಬೆಳಗಿನ ಜಾವ ಬೇವಿನ ಮರ ಏರಿ ಮಲಗಿದ್ದ ಹೆಣ್ಣು ಚಿರತೆ ಮರಿಯೊಂದನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದ್ದಾರೆ. ಭುವನೇಶಪ್ಪ ಅವರ ಜಮೀನಿನಲ್ಲಿ ಮರಿ ಕಾಣಿಸಿಕೊಂಡಿದೆ.

ರೈತ ಬೆಕ್ಕು ಎಂದು ಓಡಿಸಲು ಹೋದಾಗ ಗರ್ಜಿಸಿದೆ. ಆಗ ಚಿರತೆ ಮರಿಯೊಂಬುದು ತಿಳಿದಿದೆ. ಅರಣ್ಯ ಇಲಾಖೆಗೆ ವಿಷಯ ತಿಳಿಸಿದ್ದು, ಕನಕಗಿರಿ ಉಪವಲಯ ಅರಣ್ಯಾಧಿಕಾರಿ ಎಂ.ಡಿ. ಸುಲೇಮಾನ್ ನೇತೃತ್ವದ ತಂಡ ಸೆರೆ ಹಿಡಿದಿದೆ. ಬಲ ಮುಂಗಾಲಿಗೆ ಗಾಯವಾಗಿದ್ದರಿಂದ ತಾಯಿಯಿಂದ ಚಿರತೆ ಮರಿ ತಪ್ಪಿಸಿಕೊಂಡು ಮರವೇರಿದೆ. ನಾಲ್ಕೈದು ತಿಂಗಳಿನಿಂದ ಗಾಯಗೊಂಡಿರಬಹುದು.

ಚಿಕಿತ್ಸೆಗಾಗಿ ಚಿರತೆ ಮರಿಯನ್ನು ಗಂಗಾವತಿಗೆ ರವಾನೆ ಮಾಡಲಾಗುವುದು. ಗುಣವಾದ ಬಳಿಕ ಅರಣ್ಯಕ್ಕೆ ಬಿಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಿಬ್ಬಂದಿ ಶಿವರೆಡ್ಡಿ, ಈರಪ್ಪ ಹಾದಿಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net