ಅಧಿಕಾರಿಗಳಿಂದ ಖಾಸಗಿ ಆಸ್ಪತ್ರೆಗಳ ಪರಿಶೀಲನೆ

09052021 Kanakagiri TP EO and THO Visit
Published on

ಕನಕಗಿರಿ: ನಕಲಿ ವೈದ್ಯರು ಕರೊನಾ ಲಕ್ಷಣ ಹೊಂದಿರುವ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಆರೋಪಗಳ ಹಿನ್ನೆಲೆಯಲ್ಲಿ ತಹಸೀಲ್ದಾರ್, ತಾಪಂ ಇಒ ಹಾಗೂ ಟಿಎಚ್‌ಒ ನೇತೃತ್ವದ ತ್ರಿ ಸದಸ್ಯ ಸಮಿತಿ ಭಾನುವಾರ ಪಟ್ಟಣ ಹಾಗೂ ಮುಸಲಾಪುರ ಗ್ರಾಮದ ಖಾಸಗಿ ಆಸ್ಪತ್ರೆಗಳನ್ನು ಪರಿಶೀಲಿಸಿತು.

ಟಿಎಚ್‌ಒ ರಾಘವೇಂದ್ರ ಟಿಕಾರೆ ಮಾತನಾಡಿ, ವೈದ್ಯಕೀಯ ಪ್ರಮಾಣ ಹೊಂದಿರದ ಕೆಲವರು ಪ್ರಮಾಣೀಕೃತ ವೈದ್ಯರಂತೆ ಕರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಬಗ್ಗೆ ದೂರುಗಳು ಬಂದಿವೆ. ಕೆಲವು ಖಾಸಗಿ ಆಸ್ಪತ್ರೆಗಳನ್ನು ಮುಚ್ಚಲಾಗಿದೆ. ಒಬ್ಬ ವೈದ್ಯರ ಪ್ರಮಾಣ ಪತ್ರದ ಬಗ್ಗೆ ಅನುಮಾನವಿದ್ದು, ಪರಿಶೀಲನೆಗಾಗಿ ಡಿಎಚ್‌ಒ ಕಚೇರಿಗೆ ಕಳುಹಿಸಲಾಗಿದೆ. ಕರೊನಾ ಲಕ್ಷಣಗಳಿದ್ದರೆ ಸರ್ಕಾರಿ ಆಸ್ಪತ್ರೆಗಳಿಗೆ ಶಿಫಾರಸ್ಸು ಮಾಡುವಂತೆ ಖಾಸಗಿ ವೈದ್ಯರಿಗೆ ಸೂಚಿಸಲಾಗಿದೆ ಎಂದರು.

ತಹಸೀಲ್ದಾರ್ ರವಿ ಅಂಗಡಿ, ತಾಪಂ ಇಒ ಡಿ.ಮೋಹನ್, ಆರೋಗ್ಯ ಸಹಾಯಕ ಹರ್ಷವರ್ಧನ ಭುಜಂಗೆ, ಕಂದಾಯ ಇಲಾಖೆ ನೌಕರ ಗುರು ಪಂಜಿನ್ ಮತ್ತು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net