

ಕನಕಗಿರಿ: ನೂತನ ತಾಲೂಕಿನಲ್ಲಿ ಮೊದಲ ಬಾರಿಗೆ ನಡೆಯುತ್ತಿರುವ ಗ್ರಾಪಂ ಚುನಾವಣೆಯಲ್ಲಿ ಸಮಸ್ಯೆ ಬಾರದಂತೆ ಎಆರ್‌ಒ ಹಾಗೂ ಪಿಆರ್‌ಒಗಳು ಕರ್ತವ್ಯ ನಿರ್ವಹಿಸಬೇಕು ಎಂದು ತಾಲೂಕು ಚುನಾವಣಾ ನೋಡಲ್ ಅಧಿಕಾರಿ ಕೃಷ್ಣ ಉಕ್ಕುಂದ ಹೇಳಿದರು.
ಪಟ್ಟಣದ ನಂದಿ ಚಿತ್ರಮಂದಿರದಲ್ಲಿ ಶನಿವಾರ ಎಆರ್‌ಒ ಹಾಗೂ ಪಿಆರ್‌ಒಗಳಿಗೆ ಹಮ್ಮಿಕೊಳ್ಳಲಾಗಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು. ಗದ್ದಲ, ಗಲಾಟೆಗಳಿಗೆ ಅವಕಾಶ ನೀಡದಂತೆ ಮತದಾನ ನಡೆಯುವಂತೆ ನೋಡಿಕೊಳ್ಳಬೇಕು. ಸಿಬ್ಬಂದಿ ಮಾಸ್ಕ್ ಧರಿಸಿ ಕೆಲಸ ನಿರ್ವಹಿಸಬೇಕು ಎಂದರು.
ಪಿಎಸ್‌ಐ ಡಿ.ಸುರೇಶ ಮಾತನಾಡಿ, ಮತದಾನ ಕೇಂದ್ರಗಳ ಕಟ್ಟಡಗಳನ್ನು ಈಗಾಗಲೇ ಪರಿಶೀಲಿಸಲಾಗಿದೆ. ಪ್ರತಿ ಬೂತ್‌ಗೂ ಒಬ್ಬ ಪೇದೆ ಅಥವಾ ಗೃಹರಕ್ಷಕ ಸಿಬ್ಬಂದಿ ನೇಮಕ ಮಾಡಲಾಗುತ್ತಿದೆ. ಮತದಾನ ಮುಗಿಯುವ ವೇಳೆಗೆ ಚುನಾವಣಾಧಿಕಾರಿಗಳು ಎಷ್ಟೇ ಕೆಲಸದ ಒತ್ತಡದಲ್ಲಿದ್ದರೂ ಗೇಟ್ ಬಳಿ ಯಾರಾದರೂ ಮತಚಲಾಯಿಸುವವರು ಇದ್ದರೆ ಮತದಾನ ಕೇಂದ್ರ ವ್ಯಾಪ್ತಿಗೆ ಬರಬೇಕು ಎಂದು ಕರೆಯುವುದಲ್ಲದೇ ಅದನ್ನು ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.
ತಹಸೀಲ್ದಾರ್ ರವಿ ಅಂಗಡಿ, ಎಂಸಿಸಿ ಕಮಿಟಿ ಅಧ್ಯಕ್ಷ ಸೋಮಶೇಖರಗೌಡ, ಅಬಕಾರಿ ಇನ್ಸ್‌ಪೆಕ್ಟರ್ ಸುಮಾ, ಸಿಡಿಪಿಒ ಶ್ವೇತಾ, ತರಬೇತುದಾರ ಸರ್ಫ್‌ರಾಜ್ ಅಹ್ಮದ್ ಇತರರಿದ್ದರು.