ತಲೆನೋವಾದ ನೆಟ್‌ವರ್ಕ್ ಸಮಸ್ಯೆ

Educational & Social Census
ಕನಕಗಿರಿ ತಾಲೂಕಿನ ಹಿರೇಖೇಡ ಗ್ರಾಮದಲ್ಲಿ ಗಣತಿ ಕಾರ್ಯನಡೆಯಿತು. ಶಿಕ್ಷಕ ತಿಪ್ಪೇಶ, ವಿಎ ಶಿವಕುಮಾರ್ ಇತರರಿದ್ದರು.
Published on

ಕನಕಗಿರಿ: ತಾಲೂಕು ವ್ಯಾಪ್ತಿಯಲ್ಲಿ ಈಗಾಗಲೇ ಒಂದು ದಿನ ತಡವಾಗಿ ಆರಂಭವಾಗಿರುವ ಹಿಂದುಳಿದ ವರ್ಗಗಳ ಶೈಕ್ಷಣಿಕ ಹಾಗೂ ಸಾಮಾಜಿಕ ಗಣತಿ ಕಾರ್ಯಕ್ಕೆ ಗ್ರಾಮೀಣ ಪ್ರದೇಶಗಳಲ್ಲಿ ನೆಟ್‌ವರ್ಕ್ ಸಮಸ್ಯೆ ಎದುರಾಗಿದ್ದು ಇದು ಗಣತಿದಾರರಿಗೆ ತಲೆ ನೋವಾಗಿ ಪರಿಣಮಿಸಿದೆ.

ಗಣತಿದಾರರಿಗೆ ಈ ಮೊದಲೇ ಸರ್ವರ್ ಸಮಸ್ಯೆ ಕಾಡುತ್ತಿದೆ. ಈ ನಡುವೆ ತಾಲೂಕಿನ ರಾಮದುರ್ಗಾ, ಕೆ.ಮಲ್ಲಾಪುರ, ಹಿರೇಖೇಡ, ಹೊಸಗುಡ್ಡ, ಸಿರವಾರ, ಗೋಡಿನಾಳ, ಚಿರ್ಚನಗುಡ್ಡ, ಅಡವಿಬಾವಿ, ದೊಡ್ಡತಾಂಡಾ, ಚಿಕ್ಕತಂಡಾ, ಹುಲಸನಹಟ್ಟಿ, ಕನ್ನೇರಮಡು, ಸೋಮಸಾಗರ ಸೇರಿ ಇತರ ಗ್ರಾಮಗಳಲ್ಲಿ ನೆಟ್‌ವರ್ಕ್ ಸಮಸ್ಯೆಯಿಂದ ಸಮೀಕ್ಷಾ ಕಾರ್ಯ ಆಮೆಗತಿಯಲ್ಲಿ ಸಾಗುತ್ತಿದೆ.

60 ಪ್ರಶ್ನಾವಳಿ ಮುಗಿಸುವ ವೇಳೆಗೆ ಸರ್ವರ್ ಸಮಸ್ಯೆ ಕಾಡುತ್ತಿದೆ. ಇನ್ನೂ ಕೆಲ ಗಣತಿದಾರರು ಸರ್ವರ್ ಸಮಸ್ಯೆ ಇರುವ ಕುರಿತು ತಾಂತ್ರಿಕ ತಂಡದ ವಾಟ್ಸಾೃಪ್ ಗ್ರೂಪ್ಪಿಗೆ ರವಾನಿಸಿದರೂ ಸಮಸ್ಯೆಗೆ ಪರಿಹಾರ ದೊರೆತಿಲ್ಲ. ಈ ಮಧ್ಯೆ ನೆಟ್‌ವರ್ಕ್ ತೊಂದರೆ ಎದುರಾಗಿರುವುದು ಗಣತಿದಾರರು ಏನೂ ಮಾಡಲಾಗದೆ ಅಸಾಯಕರಾಗಿದ್ದಾರೆ.

ಸರ್ವರ್ ಸಮಸ್ಯೆ ಕುರಿತು ಗಣತಿದಾರರು ಗಮನಕ್ಕೆ ತಂದಿದ್ದಾರೆ. ತಾಂತ್ರಿಕ ಅನುಭವಿಗಳ ಜತೆ ಚರ್ಚಿಸಿ ಸರ್ವರ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು. ಗುಡ್ಡಗಾಡು ಪ್ರದೇಶದ ಗ್ರಾಮಗಳಲ್ಲಿ ನೆಟ್‌ವರ್ಕ್ ಸಮಸ್ಯೆ ಬಗ್ಗೆಯೂ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.

ವಿಶ್ವನಾಥ ಮುರುಡಿ ತಹಸೀಲ್ದಾರ್ ಕನಕಗಿರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net