ಸೋಲು-ಗೆಲುವು ಲೆಕ್ಕಿಸದೆ ಕ್ರೀಡೆಯಲ್ಲಿ ಪಾಲ್ಗೊಳ್ಳಿ, ಶಿಕ್ಷಣ ಸಂಯೋಜಕ ಆಂಜನೇಯ ಸಲಹೆ

KREEDE
ಕನಕಗಿರಿಯ ಶಿವಯೋಗಿ ಚನ್ನಮಲ್ಲ ಪ್ರಾಥಮಿಕ ಶಾಲಾ ಮೈದಾನದಲ್ಲಿ ಹುಲಿಹೈದರ್ ಹೋಬಳಿ ಮಟ್ಟದ ಕ್ರೀಡಾಕೂಟವನ್ನು ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ವೆಂಕಟ ಮಧುಸೂದನ ಉದ್ಘಾಟಿಸಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ರಾಮಚಂದ್ರ ಮಾಕಣ್ಣನವರ್, ಶಿಕ್ಷಣ ಸಂಯೋಜಕ ಆಂಜನೇಯ, ಸಿಆರ್‌ಪಿ ಶಿವಪ್ಪ ಹೆಳವರ ಇತರರಿದ್ದರು.
Published on

ಕನಕಗಿರಿ: ಕ್ರೀಡಾಪಟುಗಳು ಸೋಲು-ಗೆಲುವು ಲೆಕ್ಕಿಸದೆ ಕ್ರೀಡಾ ಮನೋಭಾವದಿಂದ ಆಟವಾಡಬೇಕು ಎಂದು ಶಿಕ್ಷಣ ಸಂಯೋಜಕ ಆಂಜನೇಯ ಹೇಳಿದರು.

ಪಟ್ಟಣದ ಶಿವಯೋಗಿ ಚನ್ನಮಲ್ಲ ಪ್ರಾಥಮಿಕ ಶಾಲಾ ಮೈದಾನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಹುಲಿಹೈದರ ಹೋಬಳಿ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು. ದೈಹಿಕ ಸದೃಢತೆಗೆ ಕ್ರೀಡಾಕೂಟಗಳು ಅವಶ್ಯವಿದ್ದು, ಸೋಲು ಗೆಲುವು ಲೆಕ್ಕಸದೆ ಕ್ರೀಡೆಯಲ್ಲಿ ಭಾಗವಹಿಸಬೇಕು. ನಿರ್ಣಾಯಕರ ನಿರ್ಧಾರ ಸರಿಯಾಗಿದ್ದರೆ ಮಾತ್ರ ಅರ್ಹ ಕ್ರೀಡಾಪಟುಗಳು ಬೆಳೆಯಲು ಸಾಧ್ಯವಾಗುತ್ತದೆ ಎಂದರು.

ರುದ್ರಮುನಿ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಶಶಿಕಲಾ ಮಾತನಾಡಿ, ಗ್ರಾಮೀಣ ಪ್ರತಿಭೆಗಳು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಲು ಶಾಲಾ ಹಂತದ ಕ್ರೀಡಾಕೂಟಗಳು ಬುನಾದಿ ಹಾಕುತ್ತವೆ. ಕ್ರೀಡೆಯಲ್ಲಿ ಪಾಲ್ಗೊಳ್ಳುವುದನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕಿದೆ ಎಂದರು.

ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ವೆಂಕಟ ಮಧುಸೂದನ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ರಾಮಚಂದ್ರ ಮಾಕಣ್ಣನವರ್, ಕ್ರೀಡಾಕೂಟದ ಸಂಯೋಜಕ ತಿಪ್ಪಣ್ಣ, ಸಿಆರ್‌ಪಿ ಶಿವಪ್ಪ ಹೆಳವರ, ಪ್ರಾಶಾಶಿ ಸಂಘದ ನಿರ್ದೇಶಕ ಮಂಜುನಾಥ ಹಾಸಗಲ್, ಮಹಿಳಾ ಕಾರ್ಯದರ್ಶಿ ದೀಪಾ ಗಡಗಿ, ಶಿಕ್ಷಕರಾದ ಡಿ.ಯು ಪಾಟೀಲ್, ನಾಗಪ್ಪ ಹೊಸ್ಮನಿ, ಕ್ರೀಡಾಪಟುಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net