ನೀರು ಪೂರೈಸದಿದ್ದರೆ ಮತದಾನ ಬಹಿಷ್ಕಾರ

background (10)
ನೀರಿಗಾಗಿ ಆಗ್ರಹಿಸಿ ದುರ್ಗಾದೇವಿ ಕ್ಯಾಂಪ್‌ನಲ್ಲಿ ನಿವಾಸಿಗಳು ದಿಢೀರ್ ಪ್ರತಿಭಟನೆ ನಡೆಸಿದರು. ನೀಲಪ್ಪ, ಹನುಮಂತಪ್ಪ, ಸೋನಮ್ಮ, ಈರಮ್ಮ, ಸೀತಮ್ಮ ಇತರರಿದ್ದರು.
Published on

ಕನಕಗಿರಿ: ಮುಸಲಾಪುರ ಗ್ರಾಪಂ ವ್ಯಾಪ್ತಿ ಬೊಮ್ಮಸಾಗರ ತಾಂಡಾದಿಂದ ಅರ್ಧ ಕಿಮೀ ದೂರದ ದುರ್ಗಾದೇವಿ ಕ್ಯಾಂಪ್ ಕುಟುಂಬಗಳ ನಿವಾಸಿಗಳಿಗೆ ತೀವ್ರ ನೀರಿನ ಅಭಾವವಾಗಿದ್ದು, ಮತದಾನ ಬಹಿಷ್ಕಾರ ಮಾಡುವುದಾಗಿ ಭಾನುವಾರದಂದು ದಿಢೀರ್ ಪ್ರತಿಭಟಿಸಿದರು.

ಹಲವು ದಿನಗಳಿಂದ ತಾಂಡಾದಲ್ಲಿ ನೀರಿನ ಸಮಸ್ಯೆಯಾಗಿದೆ. ನೀರಿಗಾಗಿ ಅರ್ಧ ಕಿ.ಮೀ ದೂರ ಸಾಗಿ ತರಬೇಕು. ಆದರೂ ಗ್ರಾಪಂ ಕ್ರಮ ಕೈಗೊಂಡಿಲ್ಲ. ನೀರಿನ ವ್ಯವಸ್ಥೆ ಕಲ್ಪಿಸದಿದ್ದರೆ ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ಹಾಕುವುದಾಗಿ ನಿವಾಸಿಗಳು ಎಚ್ಚರಿಸಿದರು. ನೀಲಪ್ಪ, ಹನುಮಂತಪ್ಪ, ಸೋನಮ್ಮ, ಈರಮ್ಮ, ಸೀತಮ್ಮ, ಪದ್ದಮ್ಮ, ಕಮಲಮ್ಮ, ವೆಂಕಟೇಶ, ವೀರೇಶ, ಮಹೇಶ, ಹನ್ಮಂತಪ್ಪ, ತಹಸೀಲಪ್ಪ, ಲಕ್ಷ್ಮಣ ಇತರರಿದ್ದರು.

ಮಾಹಿತಿ ತಿಳಿದು ಸ್ಥಳಕ್ಕೆ ಗ್ರಾಪಂ ಪಿಡಿಒ ನಾಗೇಶ ಆಗಮಿಸಿ ಮಾಹಿತಿಯನ್ನು ಮೇಲಧಿಕಾರಿಗಳಿಗೆ ತಿಳಿಸಿದರು. ತಹಸೀಲ್ದಾರ್, ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷರೂ ಆದ ತಾಪಂ ಇಒಗೆ ಮಾಹಿತಿ ತಿಳಿದು ತಾತ್ಕಾಲಿಕವಾಗಿ ಟ್ಯಾಂಕರ್ ಮೂಲಕ ನೀರು ಒದಗಿಸಿದ್ದಾರೆ. ನಂತರ ಶಾಶ್ವತ ಪರಿಹಾರ ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net