ನೀರಿಗೆ ತೊಂದರೆಯಾಗದಂತೆ ಕ್ರಮವಹಿಸಿ

CEO
ಸುಳೇಕಲ್‌ನಲ್ಲಿ ಬೋರ್‌ವೆಲ್ ವೀಕ್ಷಣೆ ಮಾಡಿದ ಜಿಪಂ ಸಿಇಒ ಜಿಪಂ ಸಿಇ ರಾಹುಲ್ ರತ್ನಂ ಪಾಂಡೆಯ ಜತೆ ತಾಪಂ ಇಒ ಚಂದ್ರಶೇಖರ್ ಬಿ. ಕಂದಕೂರ್, ಗ್ರಾಮೀಣ ಕುಡಿವ ನೀರು ಸರಬರಾಜು ಇಲಾಖೆಯ ಎಇಇ ವಿಜಯಕುಮಾರ್ ಇತರರಿದ್ದರು.
Published on

ಕನಕಗಿರಿ: ತಾಲೂಕು ವ್ಯಾಪ್ತಿಯಲ್ಲಿ ಕುಡಿವ ನೀರಿಗೆ ತೊಂದರೆಯಾಗದಂತೆ ಕ್ರಮವಹಿಸುವಂತೆ ಎಇಇ ವಿಜಯಕುಮಾರ್ ಮತ್ತು ಗ್ರಾಪಂ ಪಿಡಿಒಗೆ ಸೋಮವಾರ ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ ಸೂಚಿಸಿದರು.

ಸುಳೇಕಲ್ ಗ್ರಾಮಕ್ಕೆ ಭೇಟಿ ನೀಡಿದ ವೇಳೆ ಕುಡಿವ ನೀರು ಹಾಗೂ ಪೈಪ್‌ಲೈನ್ ಕಾಮಗಾರಿ ವೀಕ್ಷಣೆ ಬಳಿಕ ಮಾತನಾಡಿದರು. ಗ್ರಾಮದಲ್ಲಿ ಕುಡಿವ ನೀರು ಸಮಸ್ಯೆ ತಲೆದೋರಿದ ಹಿನ್ನೆಲೆಯಲ್ಲಿ ಒಎಚ್‌ಟಿ ಟ್ಯಾಂಕ್ ಮೂಲಕ ನೀರನ್ನು ಸರಬರಾಜು ಮಾಡಲು ಕ್ರಮವಹಿಸುವಂತೆ ಎಇಇಗೆ ಸೂಚಿಸಿದರು.

ಗ್ರಾಮದಲ್ಲಿ ನೀರು ಪೋಲಾಗದಂತೆ ಕ್ರಮವಹಿಸುವಂತೆ ಪಿಡಿಒಗೆ ಸೂಚಿಸಿದರು. ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಹೊಸ ಎಂಐ ಕೆರೆಯನ್ನು ವೀಕ್ಷಣೆ ಮಾಡಿದರು. ತಾಪಂ ಇಒ ಚಂದ್ರಶೇಖರ್ ಬಿ. ಕಂದಕೂರ್, ಜೆಇ ಕಿಶೋರ್, ಪಿಡಿಒ ಯು.ಮಲ್ಲಿಕಾರ್ಜುನ, ತಾಂತ್ರಿಕ ಸಂಯೋಜಕ ಸಯ್ಯದ್ ತನ್ವೀರ್, ಐಇಸಿ ಸಂಯೋಜಕ ಶಿವಕುಮಾರ್ ಕೆ, ಹಾಗೂ ಗ್ರಾಪಂ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net