ಅಂಗವಿಕಲರ ಅನುಕೂಲಕ್ಕೆ ವೀಲ್‌ಚೇರ್ ವಿತರಣೆ

Kanakagiri wheelchair distribution
ಕನಕಗಿರಿ ತಾಲೂಕಿನ ಬಸರಿಹಾಳ ಗ್ರಾಮದ ಅಂಗವಿಕಲ ಫಲಾನುಭವಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ವೀಲ್ಚೇರ್ ವಿತರಿಸಲಾಯಿತು. ಯೋಜನೆಯ ಮೇಲ್ವಿಚಾರಕ ಯಲ್ಲಾರಿ ಶಿವಾಜಿ, ಒಕ್ಕೂಟದ ಅಧ್ಯಕ್ಷ ಉಮೇಶ ನಾಯಕ ಇತರರಿದ್ದರು.
Published on

ಕನಕಗಿರಿ: ಅಂಗವಿಕಲ ಫಲಾನುಭವಿಗಳಿಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಮಂಗಳವಾರ ವೀಲ್‌ಚೇರ್, ಬೆಡ್ ಹಾಗೂ ಸ್ಟಿಕ್ ವಿತರಿಸಲಾಯಿತು.

ಕನಕಗಿರಿ-ಕಾರಟಗಿ ತಾಲೂಕಿನ ಯೋಜನಾಧಿಕಾರಿ ನಿಂಗಪ್ಪ ಅಗಸರ ಮಾತನಾಡಿ, ಅನಾರೋಗ್ಯದಿಂದ ಬಳಲುತ್ತಿದ್ದವರಿಗೆ ಮತ್ತು ಅಂಗವಿಕಲರ ಅನುಕೂಲಕ್ಕೆ ಗ್ರಾಮಾಭಿವೃದ್ಧಿ ಸಂಸ್ಥೆ ರಾಜ್ಯದ 8214 ಫಲಾನುಭವಿಗಳಿಗೆ ಸಲಕರಣೆಗಳ ಹಂಚಿಕೆಗೆ ಮುಂದಾಗಿದೆ. ತಾಲೂಕಿನ ಇಂಗಳದಾಳ, ರಾಮದುರ್ಗಾ, ಬಸರಿಹಾಳ, ಸೋಮಸಾಗರ ಗ್ರಾಮಗಳಲ್ಲಿ ಆಯ್ದ ಅಂಗವಿಕಲ ಫಲಾನುಭವಿಗಳಿಗೆ ವೀಲ್‌ಚೇರ್, ಬೆಡ್ ಹಾಗೂ ಸ್ಟಿಕ್ ವಿತರಿಸಲಾಯಿತು. ಜನಮಂಗಳ ಹಾಗೂ ಜ್ಞಾನ ವಿಕಾಸ ಕಾರ್ಯಕ್ರಮದಡಿ ಅನುಷ್ಠಾನ ಮಾಡುವ ಸಮಾಜಮುಖಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಯೋಜನೆಯ ಮೇಲ್ವಿಚಾರಕ ಯಲ್ಲಾರಿ ಶಿವಾಜಿ, ಒಕ್ಕೂಟದ ಅಧ್ಯಕ್ಷ ಉಮೇಶ ನಾಯಕ, ಸೇವಾ ಪ್ರತಿನಿಧಿಗಳಾದ ಪ್ಯಾರಿಬ್ಯಾಗಂ, ಶಿವಕುಮಾರ, ವಿಮಲಾಕ್ಷ್ಮೀ, ಕಾವೇರಿ, ಸರಸ್ವತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net