ಮಾಸಾಶನ ಮಂಜೂರಾತಿ ಪತ್ರ ವಿತರಣೆ

Development Scheme
ಕನಕಗಿರಿ ತಾಲೂಕಿನ ಚಿರ್ಚನಗುಡ್ಡ ಗ್ರಾಮದ ನಿರ್ಗತಿಕ ವೃದ್ಧರಿಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಾಸಾಶನ ಮಂಜೂರಾತಿ ಪತ್ರವನ್ನು ಯೋಜನಾಧಿಕಾರಿ ಡಿ.ನಿಂಗಪ್ಪ ಅಗಸರ ವಿತರಿಸಿದರು. ಮೇಲ್ವಿಚಾರಕ ಸಂಜೀವ್‌ಕುಮಾರ್, ಜ್ಞಾನವಿಕಾಸ ಸಮನ್ವಯಾಧಿಕಾರಿ ಮಂಜುಳಾ, ಸೇವಾ ಪ್ರತಿನಿಧಿ ಜ್ಯೋತಿ ಹಾಗೂ ಗ್ರಾಮಸ್ಥರು ಇದ್ದರು.
Published on

ಕನಕಗಿರಿ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನ ವಿಕಾಸ ಕಾರ್ಯಕ್ರಮದಡಿ ತಾಲೂಕಿನ ಚಿರ್ಚನಗುಡ್ಡದ ವೃದ್ಧೆಯರಾದ ಭೀಮಮ್ಮ ಹಾಗೂ ದುರುಗಮ್ಮಗೆ ಬಿಡುಗಡೆಯಾದ ಮಾಸಾಶನ ಮಂಜೂರಾತಿ ಪತ್ರವನ್ನು ಕಾರಟಗಿ ವಲಯದ ಯೋಜನಾಧಿಕಾರಿ ಡಿ. ನಿಂಗಪ್ಪ ಅಗಸರ ಗುರುವಾರ ವಿತರಿಸಿದರು.

ನಂತರ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಹಲವು ಸಾಮಾಜಿಕ ಕಾರ್ಯಗಳನ್ನು ಮಾಡಿಕೊಂಡು ಬರಲಾಗುತ್ತಿದೆ. ಅದರಂತೆ ನವಲಿ ವಲಯದ ಚರ್ಚನಗುಡ್ಡ ಕಾರ್ಯ ಕ್ಷೇತ್ರದಲ್ಲಿ ಇಬ್ಬರು ನಿರ್ಗತಿಕ ಮಹಿಳೆಯರನ್ನು ಗುರುತಿಸಿ ಜ್ಞಾನವಿಕಾಸ ಕಾರ್ಯಕ್ರಮದಡಿ ವೀರೇಂದ್ರ ಹೆಗ್ಗಡೆಯವರ ಸಲಹೆಯಂತೆ ವೃದ್ಧರು ತಮ್ಮ ಊಟ, ಉಪಚಾರಕ್ಕೆ ಬಳಸಿಕೊಳ್ಳಲೆಂದು ಪ್ರತಿ ತಿಂಗಳು ಸಾವಿರ ರೂ. ಮಾಶಾಸನ ನೀಡಲಾಗುತ್ತಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net