ಗಣರಾಜ್ಯೋತ್ಸವ ಸಾಹಸ ಪ್ರದರ್ಶನದಲ್ಲಿ ಕನಕಗಿರಿಯ ಕುವರಿ

Untitled design (32)
ದೆಹಲಿಯಲ್ಲಿ ಡೇರ್ ಡೆವಿಲ್ ಟೀಮ್‌ನೊಂದಿಗೆ ಲಕ್ಷ್ಮೀ ಪಚ್ಚೇರ.
Published on

ಕನಕಗಿರಿ: ಜ.26ರಂದು ದೆಹಲಿ ಗಣರಾಜ್ಯೋತ್ಸವದಲ್ಲಿ ತಾಲೂಕಿನ ಕೆ.ಕಾಟಾಪುರದ ಕುವರಿ ಲಕ್ಷ್ಮೀ ಪಚ್ಚಿ ಬೈಕ್ ರೈಡ್ ಮೂಲಕ ಸಾಹಸ ಪ್ರದರ್ಶನ ಮಾಡಲಿದ್ದಾರೆ.

ಈಗಾಗಲೇ ದೆಹಲಿಯ ರಾಷ್ಟ್ರಪತಿ ಭವನದ ಮುಂದಿನ ಕರ್ತವ್ಯ ಪಥ (ರಾಜಪಥ) ಮುಂಭಾಗದಲ್ಲಿ ಪ್ರದರ್ಶನಕ್ಕೆ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಆ ಡೇರ್ ಡೆವಿಲ್ ಟೀಮ್‌ನ 262ರಲ್ಲಿ ಓರ್ವಳಾಗಿರುವ ಲಕ್ಷ್ಮೀ ಪಚ್ಚೇರ ಬೈಕ್‌ನಲ್ಲಿ ಸಾಹಸ ಅಭ್ಯಾಸ ಮಾಡುತ್ತಿದ್ದಾಳೆ. ಜ.23ಕ್ಕೆ ರಿಹರ್ಸಲ್ ನಡೆಯಲಿದೆ.
ಪ್ರಧಾನಿ ನರೇಂದ್ರ ಮೋದಿ ಜಾರಿಗೆ ತಂದಿರುವ ನಾರಿಶಕ್ತಿ ಯೋಜನೆಯಡಿಯಿಂದ ಈ ಬಾರಿ ಗಣರಾಜ್ಯೋತ್ಸವದಲ್ಲಿ ಅರಸೇನಾಪಡೆಗಳಾದ ಸಿಆರ್‌ಪಿಎಫ್, ಎಸ್‌ಎಸ್‌ಬಿ, ಸಿಐಪಿಎಫ್, ಬಿಎಸ್‌ಎಫ್ ಇತರೇ ಪಡೆಗಳು ಗಣರಾಜ್ಯೋತ್ಸವದಲ್ಲಿ ಪೆರೇಡ್, ಸಾಹಸ ಪ್ರರ್ಶನ, ಸಂಗೀತ ನುಡಿಸಲು ಸ್ತ್ರೀಯರಿಗೆ ಅವಕಾಶ ನೀಡಲಾಗಿದೆ. ಇದರಲ್ಲಿ ಬೈಕ್ ಸಾಹಸ ಪ್ರದರ್ಶನಕ್ಕೆ 2021ರಲ್ಲಿ ಎಸ್‌ಎಸ್‌ಬಿ(ಶಶಸ್ತ್ರ ಸೀಮಾ ಬಲ)ಗೆ ಆಯ್ಕೆಯಾಗಿರುವ ಲಕ್ಷ್ಮೀ ಪಚ್ಚಿ ತಾಲೂಕಿಗೆ ಕೀರ್ತಿ ತಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net