ಅಗ್ನಿ ಶಾಮಕ ಠಾಣೆ ನಿರ್ಮಾಣಕ್ಕೆ ಭೂಮಿ

land transfer
ಕನಕಗಿರಿಯ ಸುಳೇಕಲ್ ಬಳಿ ಅಗ್ನಿ ಶಾಮಕ ಠಾಣೆ ನಿರ್ಮಾಣಕ್ಕಾಗಿ ಕಂದಾಯ ಇಲಾಖೆಗೆ 2 ಎಕರೆ ಭೂಮಿ ಹಸ್ತಾಂತರಿಸಲಾಯಿತು. ತಹಸೀಲ್ದಾರ್ ವಿಶ್ವನಾಥ ಮುರುಡಿ, ಕಂದಾಯ ನೀರಿಕ್ಷಕ ಮಂಜುನಾಥ, ಭೂ ಮಾಪಕ ರಮೇಶ, ಅಗ್ನಿ ಶಾಮಕ ಸಿಬ್ಬಂದಿ ರಂಗನಾಥ, ಮಹಿಬೂಬು, ಕಿರಣ್, ಮಲ್ಲಪ್ಪ ಜಗದೀಶ ಇತರರಿದ್ದರು.
Published on

ಕನಕಗಿರಿ: ತಾಲೂಕಿನ ಸುಳೇಕಲ್ ಸೀಮಾ ವ್ಯಾಪ್ತಿಯ ಎರಡು ಎಕರೆ ಭೂಮಿಯನ್ನು ಜಿಲ್ಲಾಧಿಕಾರಿ ಆದೇಶದ ಮೇರೆಗೆ ಮಂಗಳವಾರ ತಹಸೀಲ್ದಾರ್ ವಿಶ್ವನಾಥ ಮುರುಡಿ ಅಗ್ನಿ ಶಾಮಕ ಇಲಾಖೆಗೆ ಹಸ್ತಾಂತರಿಸಿದರು.

ಸುಳೇಕಲ್ ಗ್ರಾಮದ ಸರ್ವೇ ನಂ.134ರಲ್ಲಿನ 13 ಎಕರೆ 25 ಗುಂಟೆ ಸರ್ಕಾರಿ ಜಮೀನಾಗಿದೆ. ಇದರಲ್ಲಿ 2 ಎಕರೆಯನ್ನು ಅಗ್ನಿ ಶಾಮಕ ಠಾಣೆಯ ಕಟ್ಟಡ ನಿರ್ಮಾಣಕ್ಕಾಗಿ ನೀಡಲಾಗಿದೆ. ಇದೇ ಸರ್ವೇ ನಂಬರ್‌ನಲ್ಲಿ ಇನ್ನೂ 3 ಎಕರೆ ಭೂಮಿಯನ್ನು ಕೆಎಸ್‌ಆರ್‌ಟಿಸಿ ಸಾರಿಗೆ ಇಲಾಖೆಗೆ ಹಸ್ತಾಂತರಿಸಲಾಗಿದೆ.

ಇವರೆಡು ಸರ್ವೇ ನಂ. ಭೂಮಿಯಲ್ಲಿ ಈಗಾಗಲೇ ಎರಡೂ ಇಲಾಖೆಗಳ ಹೆಸರಿನಲ್ಲಿ ನಾಮಫಲಕ ಅಳವಡಿಸಲಾಗಿದೆ. ಜಿಲ್ಲಾಧಿಕಾರಿ ಆದೇಶ ಮೇರೆಗೆ ಎರಡು ಇಲಾಖೆಗಳಿಗೆ ಭೂಮಿ ನೀಡಲಾಗಿದೆ ಎಂದು ತಹಸೀಲ್ದಾರ್ ವಿಶ್ವನಾಥ ಮುರುಡಿ ತಿಳಿಸಿದರು.

ಜಿಲ್ಲಾ ಅಗ್ನಿ ಶಾಮಕ ಅಧಿಕಾರಿ ರಾಮಪ್ಪ ಮಾತನಾಡಿ, ಕನಕಗಿರಿ ಹೊಸ ತಾಲೂಕಿನಲ್ಲಿ ಅಗ್ನಿ ಶಾಮಕ ಠಾಣೆ ನಿರ್ಮಾಣಕ್ಕೆ ಸುಳೇಕಲ್ ಬಳಿ 2 ಎಕರೆ ಭೂಮಿಯನ್ನು ಇಲಾಖೆಗೆ ನೀಡಲಾಗಿದೆ. ಭೂಮಿಗೆ ಸಂಬಂಧಿಸಿದ ದಾಖಲಾತಿಗಳನ್ನು ಮೇಲಧಿಕಾರಿಗಳಿಗೆ ಕಳುಹಿಸಿ ಕಟ್ಟಡ ನಿರ್ಮಾಣಕ್ಕೆ ಮುಂದಾಗುತ್ತೇವೆ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net