ಸತತ ಪರಿಶ್ರಮದಿಂದ ಯಶಸ್ಸು ಸಾಧ್ಯ

Kanakagiri degree students sendoff
ಕನಕಗಿರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಪದವಿ ವಿದ್ಯಾರ್ಥಿಗಳ ಬೀಳ್ಕೊಡುಗೆ, ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಸಮಾರೋಪ ಕಾರ್ಯಕ್ರಮವನ್ನು ಪ್ರಾಚಾರ್ಯ ಡಾ. ಬಜರಂಗ ಬಲಿ ಉದ್ಘಾಟಿಸಿದರು. ಪ್ರಾಧ್ಯಾಪಕರಾದ ಲಲಿತಾ ಎನ್.ಕಿನ್ನಾಳ, ರಕ್ಷಿತ್ ಎ., ಡಾ. ಆಶಿಕಾ, ಮರ್ವಿನ್ ಡಿಸೋಜ, ಡಾ. ವೀರೇಶ ಕೆ., ಗೋಪಾಲ ರೆಡ್ಡಿ ಇತರರಿದ್ದರು.
Published on

ಕನಕಗಿರಿ: ಬದುಕನ್ನು ರೂಪಿಸಿಕೊಳ್ಳಲು ಪರಿಶ್ರಮವೇ ಮೂಲ ಮಂತ್ರವಾಗಲಿ. ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಲು ವಿದ್ಯೆಯಿಂದ ಮಾತ್ರ ಸಾಧ್ಯ ಎಂದು ಕಂಪ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಚಂದ್ರಶೇಖರ್ ಬಿಳೇಗುಡ್ಡ ಹೇಳಿದರು.

ಪಟ್ಟಣದ ಶ್ರೀ ಪಂಪಣ್ಣ ಶರಣಪ್ಪ ಗುಗ್ಗಳಶೆಟ್ರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಸಮಾರೋಪ, ಪತ್ರಿಕೋದ್ಯಮ ವಿಭಾಗದ ಜ್ಞಾನ ಸ್ಫೂರ್ತಿ ಪತ್ರಿಕೆಯ ಎರಡನೇ ಸಂಚಿಕೆ ಬಿಡುಗಡೆ ಹಾಗೂ ಪದವಿ ಅಂತಿಮ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದರು. ವ್ಯಕ್ತಿ ಮನಸ್ಸು ಮಾಡಿದರೆ ಏನಾದರೂ ಸಾಧಿಸಬಹುದು. ಪ್ರತಿಭೆ ಯಾರ ಸ್ವತ್ತು ಅಲ್ಲ. ಸತತ ಪರಿಶ್ರಮದಿಂದ ಯಾವುದೇ ಸ್ಪರ್ಧೆಗಳಲ್ಲಿ ಯಶಸ್ಸು ಗಳಿಸಬಹುದು ಎಂದರು.

ಶಿಕ್ಷಕ ಕೆ.ಎಂ. ಮೆಹಬೂಬ್ ಅಲಿ ಮಾತನಾಡಿ, ವಿದ್ಯಾರ್ಥಿಗಳು ಮೊದಲು ತಮ್ಮನ್ನು ತಾವು ಅರಿತು ಗುರಿಯತ್ತ ಮುನ್ನುಗ್ಗಬೇಕು. ಮಾಡುವ ಕೆಲಸದಲ್ಲಿ ಶ್ರದ್ಧೆ ಇದ್ದಾಗ ಸುಂದರ ಭವಿಷ್ಯ ಕಾಣಲು ಸಾಧ್ಯ ಎಂದು ತಿಳಿಸಿದರು. ಪ್ರಾಧ್ಯಾಪಕಿ ಲಲಿತಾ ಎನ್. ಕಿನ್ನಾಳ ಮಾತನಾಡಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net