ದೃಷ್ಟಿ ನೀಡುವ ಕೆಲಸ ಶ್ರೇಷ್ಠ

knk-1
ಕನಕಗಿರಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆದ ನೇತ್ರ ಶಸ್ತ್ರ ಚಿಕಿತ್ಸಾ ಉಚಿತ ಶಿಬಿರದ ಸಮಾರೋಪದಲ್ಲಿ ವೈದ್ಯಾಧಿಕಾರಿ ಸಹನಾ ಮಾತನಾಡಿದರು. ನೌಕರ ಸಂಘದ ರಾಜ್ಯ ಪರಿಷತ್ ಸದಸ್ಯ ಮಲ್ಲೇಶಪ್ಪ, ಆರೋಗ್ಯ ಸಹಾಯಕ ರಮೇಶ, ಮಾತೃಭೂಮಿ ಸಂಘದ ಉಪಾಧ್ಯಕ್ಷ ರಮೇಶ ಸೂಡಿ ಇತರರಿದ್ದರು.
Published on

ಕನಕಗಿರಿ: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ಥಳೀಯ ಮಾತೃಭೂಮಿ ಯುವಶಕ್ತಿ ಸಂಘ, ಬೆಂಗಳೂರಿನ ವಿವೇಕ ದೃಷ್ಟಿ ಹಾಗೂ ಆರೋಗ್ಯ ಇಲಾಖೆ ಸಹಯೋಗದಲ್ಲಿ ಶುಕ್ರವಾರದಿಂದ ಎರಡು ದಿನ ಆಯೋಜಿಸಿದ್ದ ಬೃಹತ್ ನೇತ್ರ ತಪಾಸಣೆ ಉಚಿತ ಶಿಬಿರದಲ್ಲಿ ಒಟ್ಟು 284 ಜನ ಶಸ್ತ್ರ ಚಿಕಿತ್ಸೆ ಪಡೆದರು.

ಶನಿವಾರ ನಡೆದ ಸಮಾರೋಪ ಸಮಾರಂಭದಲ್ಲಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಸಹನಾ ಮಾತನಾಡಿ, ಒಬ್ಬ ವ್ಯಕ್ತಿ ನೇತ್ರ ಶಸ್ತ್ರ ಚಿಕಿತ್ಸೆಗೆ ಪಡೆಯಬೇಕಾದರೆ ಹತ್ತಾರು ಸಾವಿರ ರೂ. ಖರ್ಚಾಗುತ್ತದೆ. ಇದು ಬಡವರಿಗೆ ಹೊರೆ. ಆದರೆ, ನೂರಾರು ಜನರಿಗೆ ಉಚಿತವಾಗಿ ಶಸ್ತ್ರ ಚಿಕಿತ್ಸೆ ಮಾಡಿಸುವ ಮೂಲಕ ಅನುಕೂಲ ಕಲ್ಪಿಸಲಾಗಿದೆ. ದೃಷ್ಟಿ ನೀಡುವ ಕೆಲಸ ಶ್ರೇಷ್ಠ ಎಂದರು.

ವಿವೇಕ ದೃಷ್ಟಿಯ ವೈದ್ಯ ಡಾ. ಚೇತನ್ ಮಾತನಾಡಿ, ಮಾತೃಭೂಮಿ ಯುವಶಕ್ತಿ ಸಂಘದ ಸದಸ್ಯರು ಏಳು ಶಿಬಿರಗಳಲ್ಲಿ 2800ಕ್ಕೂ ಹೆಚ್ಚು ಜನರಿಗೆ ಶಸ್ತ್ರ ಚಿಕಿತ್ಸೆ ಮಾಡಿಸುವ ಮೂಲಕ ಉತ್ತಮ ಸಮಾಜ ಸೇವೆ ಮಾಡಿದ್ದಾರೆ ಎಂದರು.

ನೇತ್ರಾಧಿಕಾರಿ ಮುರ್ತುಜಸಾಬ, ವಿವೇಕಾನಂದ ಕಣ್ಣಿನ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಗೋಪಾಲಕೃಷ್ಣ ಬೆಂಗಳೂರು, ವೈದ್ಯೆ ವಸಂತಾ, ನೌಕರ ಸಂಘದ ರಾಜ್ಯ ಪರಿಷತ್ ಸದಸ್ಯ ಮಲ್ಲೇಶಪ್ಪ, ಆರೋಗ್ಯ ಸಹಾಯಕ ರಮೇಶ, ಮಾತೃಭೂಮಿ ಸಂಘದ ಉಪಾಧ್ಯಕ್ಷ ರಮೇಶ ಸೂಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net