ಛೋಟಾ ಮೊಹರಂಗೆ ಅದ್ದೂರಿ ವಿದಾಯ

MOHARAM
ಕನಕಗಿರಿಯ ಗಜಲಕ್ಷ್ಮೀ ದೇವಸ್ಥಾನ ಮುಂಭಾಗದಲ್ಲಿ ಕೌಡೇಪೀರ್ ದೇವರುಗಳು ಪರಸ್ಪರ ಆಲಂಗಿಸಿ ಹಬ್ಬಕ್ಕೆ ವಿದಾಯ ಹೇಳಿದವು.
Published on

ಕನಕಗಿರಿ: ಛೋಚಾ ಮೊಹರಂ ಎಂದೇ ಕರೆಯಲ್ಪಡುವ ಕೌಡೇಪೀರ್‌ಗೆ ಸೋಮವಾರ ಪಟ್ಟಣದಲ್ಲಿ ಅದ್ದೂರಿ ವಿದಾಯ ಹೇಳಲಾಯಿತು.

ಹಿಂದು-ಮುಸ್ಲಿಂ ಭಾವೈಕ್ಯತೆಯ ಅಲಾಯಿ ದೇವರುಗಳು ದಫನ್‌ಗೊಂಡ ಮೂರನೇ ದಿನಕ್ಕೆ ಕೌಡೇಪೀರ್‌ಗಳನ್ನು ಪಟ್ಟಣದ ಪ್ರಸಿದ್ಧ ಮಸೀದಿ ಹಾಗೂ ಓಣಿಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದು, ಅಂದಿನಿಂದ ಸೋಮವಾರದವರೆಗೆ ಭಕ್ತರ ಮನೆಗಳಿಗೆ ತೆರಳಿ ಹರಕೆ ತೀರಿಸಿದವು.

ಸೋಮವಾರ ಸಂಜೆ ನಾನಾ ಕಡೆಗಳ 30ಕ್ಕೂ ಹೆಚ್ಚು ಕೌಡೇಪೀರ್‌ಗಳು ರಾಜಬೀದಿಯ ಗಜಲಕ್ಷ್ಮೀ ದೇವಸ್ಥಾನದ ಮುಂಭಾಗದಲ್ಲಿ ಸೇರಿ ಪರಸ್ಪರ ಆಲಂಗಿಸಿಕೊಂಡವು. ದೇವರ ಹೇಳಿಕೆ ನಡೆಯಿತು.

ನೆರೆದಿದ್ದ ಭಕ್ತರು ಮಂಡಾಳು ಅರ್ಪಿಸಿ ಭಕ್ತಿ ಸಮರ್ಪಿಸಿದರು. ನಂತರ ತ್ರಿವೇಣಿ ಸಂಗಮಕ್ಕೆ ತೆರಳಿ ದಫನ್‌ಗೊಂಡವು. ವಿದಾಯ ಸಂದರ್ಭದಲ್ಲಿ ರಾಜಬೀದಿಯಲ್ಲಿ ಸಾವಿರಾರು ಜನರು ಸೇರಿದ್ದರು. ಯುವಕರು ಹಲಗೆ ಸದ್ದಿಗೆ ಹೆಜ್ಜೆ ಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net