ಅಂಗನವಾಡಿ ಮಕ್ಕಳಿಗೆ ಕುರ್ಚಿ ಕೊಡುಗೆ: ಚಿಕ್ಕಮಾದಿನಾಳ ಗ್ರಾಪಂನಿಂದ ವಿತರಣೆ

15072022 Kustagi child chir distributor
Published on

ಕನಕಗಿರಿ: ತಾಲೂಕಿನ ಚಿಕ್ಕ ಮಾದಿನಾಳ ಗ್ರಾಪಂ ವ್ಯಾಪ್ತಿ ಜಾಲಿಹುಡಾ ಗ್ರಾಮದ ಅಂಗನವಾಡಿ ಮಕ್ಕಳಿಗಾಗಿ ಗ್ರಾಪಂನಿಂದ 30 ಕುರ್ಚಿಗಳನ್ನು ಶುಕ್ರವಾರ ವಿತರಿಸಲಾಗಿದೆ.

ಗ್ರಾಪಂ ಸದಸ್ಯೆ ಮಲ್ಲಮ್ಮ ಶಂಕ್ರಪ್ಪ ಮಮ್ಮಾಳಿ ಮಾತನಾಡಿ, ಖಾಸಗಿ ಶಾಲೆಗಳಲ್ಲಿ ಚಿಣ್ಣರನ್ನು ಆಕರ್ಷಿಸಲು ಮಕ್ಕಳಿಗೆ ಚೇರ್, ಆಟಿಕೆ ಸಾಮಗ್ರಿ ಇರಿಸಲಾಗುತ್ತದೆ. ಅದರಂತೆ ಬಡ ಮಕ್ಕಳನ್ನು ಅಂಗನವಾಡಿ ಶಾಲೆಗೆ ಆಕರ್ಷಿಸುವ ಉದ್ದೇಶದಿಂದ ಪಡೆದು ಪಂಚಾಯತಿ ವ್ಯಾಪ್ತಿಯ ಅಂಗನವಾಡಿಗಳಿಗೆ 15ನೇ ಹಣಕಾಸು ಅನುದಾನದಲ್ಲಿ ಕುರ್ಚಿಗಳನ್ನು ವಿತರಿಸಲು ನಿರ್ಧರಿಸಲಾಗಿದೆ. ಗ್ರಾಮದ ಅಂಗನವಾಡಿಯಲ್ಲಿ ಮಕ್ಕಳಿಗೆ ಶೌಚಗೃಹ, ಗೋಡೆ ಬರಹ, ಕಲಿಕಾಕ್ಷರಗಳನ್ನು ಬರೆಸುವ ಕುರಿತು ಪಿಡಿಒ ಜತೆ ಚರ್ಚಿಸಲಾಗಿದೆ ಎಂದು ತಿಳಿಸಿದರು. ಅಂಗನವಾಡಿ ಕಾರ್ಯಕರ್ತೆ ವಿಜಯಲಕ್ಷ್ಮೀ, ಸಹಾಯಕಿ ಮಲಿಯಮ್ಮ, ಹುಲಿಗೆಮ್ಮ, ನಾಗಪ್ಪ ಮಮ್ಮಾಳಿ, ನಿಂಗಪ್ಪ ವಾಲೇಕಾರ್ ಇದ್ದರು.

ಗ್ರಾಪಂ ವ್ಯಾಪ್ತಿಯಲ್ಲಿ ಒಟ್ಟು 10 ಅಂಗನವಾಡಿ ಕೇಂದ್ರಗಳಿದ್ದು, 15ನೇ ಹಣಕಾಸು ಅನುದಾನದಲ್ಲಿ ಒಂದು ಲಕ್ಷ ರೂ. ವೆಚ್ಚದಲ್ಲಿ ತಲಾ 30 ಕುರ್ಚಿಗಳನ್ನು ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಚೇರ್‌ಗಳನ್ನು ನೀಡಲಾಗುವುದು| ಲಕ್ಷ್ಮೀದೇವಿ ಪ್ರಭಾರ ಪಿಡಿಒ, ಚಿಕ್ಕಮಾದಿನಾಳ ಗ್ರಾಪಂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net