ಚಿಕ್ಕಡಂಕನಕಲ್ ಶಾಲೆ ಆವರಣ ಜಲಾವೃತ

28082022 kanakagiri school
Published on

ಕನಕಗಿರಿ: ಎರಡು ದಿನಗಳಿಂದ ಸುರಿದ ಮಳೆಗೆ ತಾಲೂಕಿನ ವಿವಿಧೆಡೆ ಜಮೀನುಗಳು ಜಲಾವೃತವಾಗಿದ್ದು, ಚಿಕ್ಕಡಂಕನಕಲ್ ಸರ್ಕಾರಿ ಶಾಲೆಯ ಆವರಣದಲ್ಲಿ ನೀರು ಸಂಗ್ರಹವಾಗಿದೆ. ಕಳೆದ ಕೆಲ ದಿನಗಳಿಂದ ಮಳೆ ಇಲ್ಲದೆ ಬೆಳೆಗಳು ಒಣಗುವ ಹಂತಕ್ಕೆ ತಲುಪಿದ್ದವು. ಈ ನಡುವೆ ಶುಕ್ರವಾರ ಹಾಗೂ ಶನಿವಾರ ತಡರಾತ್ರಿ ಸುರಿದ ಮಳೆ ಬೆಳೆಗಳಿಗೆ ಕಳೆ ಬಂದಿದ್ದು, ರೈತರು ಸಂತಸಗೊಂಡಿದ್ದಾರೆ. ಕಲಕೇರಿ, ಸುಳೇಕಲ್, ಬೆನಕನಾಳ, ಜೀರಾಳ ಸೇರಿದಂತೆ ಇತರ ಗ್ರಾಮಗಳಲ್ಲಿನ ಸೂರ್ಯಕಾಂತಿ, ತೊಗರಿ ಸೇರಿದಂತೆ ನಾನಾ ಬೆಳೆಗಳಲ್ಲಿ ನೀರು ನಿಂತಿದ್ದು, ಹರಿಯಲು ರೈತರು ವ್ಯವಸ್ಥೆ ಮಾಡುತ್ತಿರುವುದು ಕಂಡುಬಂತು. ಚಿಕ್ಕಡಂಕನಕಲ್ ಗ್ರಾಮದ ಸರ್ಕಾರಿ ಹಿಪ್ರಾ ಶಾಲೆಯ ಮೈದಾನ ಮಳೆ ನೀರಿನಿಂದ ಆವೃತಗೊಂಡಿದೆ. ಕಾಂಪೌಂಡ್ ಒಳಗೆ ಶಾಲಾ ಕಟ್ಟಡಕ್ಕಾಗಿ ಮರಳು, ಕಂಕರ್ ಸೇರಿದಂತೆ ಇತರ ವಸ್ತುಗಳನ್ನು ಸಂಗ್ರಹಿಸಿದ್ದು, ಮಳೆ ನೀರಿನಲ್ಲಿಯೇ ಇವೆ. ಇದರಿಂದ ಮಕ್ಕಳ ಪ್ರಾರ್ಥನೆ, ಆಟೋಟೊಪಗಳಿಗೆ ತೊಂದರೆಯಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net